ಹುಬ್ಬಳ್ಳಿ –
ಹುಬ್ಬಳ್ಳಿಯಲ್ಲಿ ಚಿಗರಿ ಮತ್ತೊಂದು ಬಲಿ – ರಸ್ತೆ ದಾಟುವಾಗ ಚಿಗರಿ ಬಸ್ ಗೆ ಬಲಿಯಾದ ವಯೋವೃದ್ದ ಹೌದು
ರಸ್ತೆ ದಾಟುವಾಗ ಚಿಗರಿ ಬಸ್ ವೊಂದು ಡಿಕ್ಕಿಯಾಗಿ ವಯೋವೃದ್ದನೊರ್ವ ಸಾವಿಗೀಡಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ನಗರದ ವಿದ್ಯಾ ನಗರದಲ್ಲಿ ಈ ಒಂದು ಘಟನೆ ನಡೆದಿದೆ.ಬಿಆರ್ ಟಿಎಸ್ ರಸ್ತೆಯಲ್ಲಿ ರಸ್ತೆಯನ್ನು ದಾಟುವ ಸಮಯದಲ್ಲಿ ಈ ಒಂದು ಅಪಘಾತವಾಗಿದ್ದು ಗಂಗಾಧರ ಬಸವಂತಪ್ಪ ಮೊಮ್ಮಿಗಟ್ಟಿ ಎಂಬು ವರೇ ಮೃತ ದುರ್ದೈವಿಯಾಗಿದ್ದು
ನಗರದ ಮಂಜುನಾಥ ನಗರದ ನಿವಾಸಿಯಾಗಿ ದ್ದಾರೆ.ಅಪಘಾತದ ಸುದ್ದಿಯನ್ನು ತಿಳಿದ ಉತ್ತರ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀ ಲನೆ ಮಾಡಿ ಚಿಗರಿ ಬಸ್ ನ್ನು ವಶಕ್ಕೆ ತಗೆದುಕೊಂ ಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಯನ್ನು ಮಾಡ್ತಾ ಇದ್ದಾರೆ.
ಇನ್ನೂ ಇತ್ತ ಹುಬ್ಬಳ್ಳಿ ಧಾರವಾಡ ಮಧ್ಯದಲ್ಲಿ ಚಿಗರಿ ಆರಂಭಗೊಂಡ ಆರು ವರ್ಷಗಳಿಂದ ಈವರೆಗೆ ಚಿಗರಿ ಕುರಿತಂತೆ ವಿರೋಧದ ಮಾತು ಗಳು ಕೇಳಿ ಬರುತ್ತಿದ್ದು ಅಪಘಾತಗಳು ಕೂಡಾ ಹೆಚ್ಚಾಗುತ್ತಿದ್ದು ಸಧ್ಯ ಆರೋಪಕ್ಕೆ ಈ ಒಂದು ಅಪಘಾತವೇ ಸಾಕ್ಷಿಯಾಗಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..