ದುಬೈ –
ಏಷ್ಯಾಕಪ್ ಟಿ20 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 5 ವಿಕೆಟ್ ಜಯಗಳಿಸಿದೆ.ಹೌದು ಈ ಮೂಲಕ ಟಿ20 ವಿಶ್ವ ಕಪ್ ಸೋಲಿನ ಸೇಡನ್ನು ಭಾರತ ತಂಡ ಈ ಒಂದು ಗೆಲುವಿನ ಮೂಲಕ ತೀರಿಸಿಕೊಂಡಿದೆ.
ಆಲ್ ರೌಂಡ್ ಆಟವಾಡಿದ ಹಾರ್ದಿಕ ಪಾಂಡ್ಯ 17 ಎಸೆತಗಳಲ್ಲಿ 33 ರನ್ ಗಳಿಸಿದ್ದು ಮೂರು ವಿಕೆಟ್ ಪಡೆದಿದ್ದಾರೆ.ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 19.5 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡ 147 ರನ್ ಗಳಿಸಿತು.ರಿಜ್ವಾನ್ 43, ಇಫ್ತಿಕಾರ್ ಅಹಮದ್ 28 ರನ್ ಗಳಿಸಿದರು.ಭಾರತದ ಪರವಾಗಿ ಭುವನೇಶ್ವರ್ ಕುಮಾರ್ 4 ಹಾರ್ದಿಕ್ ಪಾಂಡ್ಯ 3,ಅರ್ಷ್ ದೀಪ್ ಸಿಂಗ್ 2,ಆವೇಶ್ ಖಾನ್ 1 ವಿಕೆಟ್ ಪಡೆದರು.
ಗೆಲುವಿನ ಗುರಿ ಬೆನ್ನತ್ತಿದ ಭಾರತ 19.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು.ವಿರಾಟ್ ಕೊಹ್ಲಿ 35, ಜಡೇಜಾ 35,ಹಾರ್ದಿಕ್ ಪಾಂಡ್ಯ 33 ರನ್ ಗಳಿಸಿದರು. ನವಾಜ್ 3,ನಸೀಮ್ ಶಾ 2 ವಿಕೆಟ್ ಪಡೆದರು.ಹಾರ್ದಿಕ್ ಪಾಂಡ್ಯ ಶ್ರೇಷ್ಠ ಪುರಸ್ಕೃತರಾದರು.15 ನೇ ಓವರ್ ನಲ್ಲಿ 89 ರನ್ ಗೆ 4 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ಸಂಕಷ್ಟದಲ್ಲಿತ್ತು.5 ನೇ ವಿಕೆಟ್ ಗೆ 52 ರನ್ ಜತೆಯಾಟ ವಾಡಿದ ರವೀಂದ್ರ ಜಡೇಜಾ,ಹಾರ್ದಿಕ್ ಪಾಂಡ್ಯ ಗೆಲುವಿ ನಲ್ಲಿ ಪ್ರಮುಖ ಪಾತ್ರ ವಹಿಸಿದರು.ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 7ನೇ ಬಾರಿಗೆ ಏಷ್ಯಾ ಕಪ್ ನಲ್ಲಿ ಆಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.ಅತಿ ಹೆಚ್ಚು ಬಾರಿ ಏಷ್ಯಾ ಕಪ್ ನಲ್ಲಿ ಆಡಿದ ಭಾರತೀಯ ಆಟ ಗಾರನಾಗಿದ್ದಾರೆ.ಸಚಿನ್ ತೆಂಡೂಲ್ಕರ್,ಎಂ.ಎಸ್.ಧೋನಿ ಆರು ಬಾರಿ ಏಷ್ಯಾಕಪ್ ಟೂರ್ನಿಗಳಲ್ಲಿ ಆಡಿದ್ದರು.
28 ಪಂದ್ಯಗಳನ್ನಾಡಿದ ರೋಹಿತ್ ಶರ್ಮಾ ಏಷ್ಯಾ ಕಪ್ ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಶ್ರೀಲಂಕಾದ ಮಹೆಲಾ ಜಯವರ್ಧನೆ ಅವರೊಂದಿಗೆ ಜಂಟಿ ಮೊದಲ ಸ್ಥಾನಕ್ಕೇರಿ ದ್ದಾರೆ.