ಕುಂದಗೋಳ ದ ಚಿಕ್ಕನರ್ತಿ ಗ್ರಾಮದಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ – ಪಂದ್ಯಾವಳಿ ಕುರಿತು ಒಂದು ವಿಶೇಷ ಮಾಹಿತಿ…..

Suddi Sante Desk

ಕುಂದಗೋಳ –

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಚಿಕ್ಕನರ್ತಿ ಗ್ರಾಮದ ಶ್ರೀ ಗುರುಪಾದೇಶ್ವರ ಯುವಕ ಮಂಡಳ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ೬೦ ಕೆಜಿ ಕಬ್ಬಡ್ಡಿ ಪಂದ್ಯಾವಳಿಗಳು ಇದೇ ದಿನಾಂಕ ೧೩ ರಂದು ಇಲ್ಲಿನ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಲಿವೆ.

ಇನ್ನೂ ಸಮವಸ್ತ್ರ ಕೊಡುಗೆಯನ್ನು ಯರಗುಪ್ಪಿ ಗ್ರಾ.ಪಂ. ಸದಸ್ಯ ಭೀಮಪ್ಪ ಮಾಯಣ್ಣವರ,ದಿ.ಬಾಬುಗೌಡ್ರ ಪಾಟೀಲ್,ಹಾಗೂ ಮಂಜುನಾಥ ಯಕ್ಕಡಿ ಅಭಿಮಾನಿ ಬಳಗ ಮೈದಾನ ಸೇವೆ ಚಂದ್ರಶೇಖರ ಸೋಮರಡ್ಡಿ, ನೆನಪಿನ ಕಾಣಿಕೆ ಹನುಮಂತ ರೊಟ್ಟಿಗವಾಡ ಇಂಡಿಯನ್ ನಿರ್ವಹಿಸಲಿದ್ದಾರೆ.ಪಂದ್ಯಾವಳಿಯ ಪ್ರಥಮ ಬಹುಮಾನ ಕಾಂಗ್ರೆಸ್ ಮುಖಂಡ ಅಡಿವೆಪ್ಪ ಶಿವಳ್ಳಿ ಅವರಿಂದ ಟ್ರೋಪಿ ಹಾಗೂ ೧೦೦೦೧ ರೂ, ದ್ವಿತೀಯ ಬಹುಮಾನ ಗ್ರಾ.ಪಂ ಸದಸ್ಯರಾದ ಮಂಜುಳಾ ರೊಟ್ಟಿಗವಾಡ, ಸರೋಜಾ ಪಾಟೀಲ್ ಅವರಿಂದ ಟ್ರೋಫಿ ಹಾಗೂ ೭೦೦೧ ರೂ, ತೃತೀಯ ಬಹುಮಾನ ಗ್ರಾ.ಪಂ.ಉಪಾಧ್ಯಕ್ಷ ಮಹಾಂತೇಶ ತಡಸದ ಅವರಿಂದ ಟ್ರೋಫಿ ಹಾಗೂ ೫೦೦೧ ರೂ, ಉತ್ತಮ ತಂಡ ಬಹುಮಾನ ಹೈಕೋರ್ಟ್ ವಕೀಲರಾದ ಎಚ್.ಎಲ್.ನದಾಫ ಅವರಿಂದ ಟ್ರೋಫಿ ಹಾಗೂ ೩೦೦೧ ರೂ, ಉತ್ತಮ ದಾಳಿಗಾರ ಬಹುಮಾನ ಬಸವರೆಡ್ಡಪ್ಪ ದ್ಯಾವನೂರ ಅವರಿಂದ ೧೦೦೧ ರೂ, ಉತ್ತಮ ಹಿಡಿತ ಗಾರ ಬಹುಮಾನ ಕಲ್ಲಪ್ಪ ಶಾನವಾಡ ಅವರಿಂದ ೧೦೦೧ ರೂ, ಉತ್ತಮ ಆಲ್ ರೌಂಡರ್ ಬಹುಮಾನ ಕಲ್ಲಪ್ಪ ಶಾನವಾಡ ಶಾನವಾಡ ಅವರಿಂದ ೧೦೦೧ ರೂ, ಇರಲಿದ್ದು, ಪಂದ್ಯಾವಳಿಯ ಪ್ರವೇಶ ಶುಲ್ಕ ೪೦೪ ರೂ.ಇರಲಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.