ಹುಬ್ಬಳ್ಳಿ –
ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ಕರೆ ನೀಡಿರುವ ಭಾರತ್ ಬಂದ್ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲೂ ರೈತರು ಪ್ರತಿಭಟನೆ ಮಾಡ್ತಾ ಇದ್ದಾರೆ.ರೈತರ ಈ ಹೋರಾಟಕ್ಕೆ ಭಾರತೀಯ ಯೋಧ ಬೆಂಬಲ ನೀಡಿದ್ದಾರೆ. ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಪ್ರತಿಭಟನೆಯಲ್ಲಿ ಯೋಧ ಪಾಲ್ಗೊಂಡು ರೈತರ ಹೋರಾಟಕ್ಕೇ ಬೆಂಬಲ ನೀಡಿದ್ರು.
ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮದ ಯೋಧನಾಗಿರುವ ರಮೇಶ ಮಾಡಳ್ಳಿ ಸಧ್ಯ ರಜೆ ಮೇಲೆ ಬಂದಿದ್ದಾರೆ. ಪ್ರತಿಭಟನೆಗೆ ಬರುತ್ತಿದ್ದ ಯೋಧನನ್ನ ಮೊದಲು ಪೊಲೀಸರು ತಡೆದಿದ್ದಾರೆ. ಆದ್ರೂ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಯೋಧನನ್ನು ಪೊಲೀಸ್ ವಾಹನದಲ್ಲಿ ಪೊಲೀಸರು ಕರೆದುಕೊಂಡು ಹೋದರು.
ಸೇನೆಯಲ್ಲಿದ್ದು ಪ್ರತಿಭಟನೆಗೆ ಬಂದಿದ್ದಕ್ಕೆ ಯೋಧನನ್ನು ಪೊಲೀಸರು ವಶಕ್ಕೆ ಪಡೆದರು ಪೊಲೀಸರು.ರಮೇಶ ಮಾಡಳ್ಳಿಯನ್ನ ವಶಕ್ಕೆ ಪಡೆದ ಖಾಕಿ ಪಡೆ ಕರೆದುಕೊಂಡು ಹೋದರು. ಸಧ್ಯ ರಮೇಶ ರಜೆಯ ಮೇಲೆ ಊರಿಗೆ ಬಂದಿದ್ದು ಅಸ್ಸಾಂನ ಆರ್.ಆರ್. ವಿಂಗ್ ನಲ್ಲಿ ಹವಾಲ್ದಾರ್ ಆಗಿದ್ದಾರೆ.
ಹೋರಾಟಕ್ಕೇ ರೈತರಿಗೆ ಬೆಂಬಲ ನೀಡಿದ್ದು ಸರಿ ಆದರೆ ಸಧ್ಯ ರೈತರ ಹೋರಾಟ ಕೇಂದ್ರ ಸರ್ಕಾರದ ವಿರುದ್ದವಾಗಿದೆ. ಹೀಗಾಗಿ ಕೇಂದ್ರ ಸರ್ಕಾರದ ವಿರುದ್ದದ ಈ ಒಂದು ಹೋರಾಟದಲ್ಲಿ ಪಾಲ್ಗೊಂಡಿದ್ದು ತಪ್ಪು. ಯೋಧ ರಮೇಶ ಅವರು ಕೇಂದ್ರ ಸರ್ಕಾರದ ಒಬ್ಬ ನೌಕರರಾಗಿದ್ದು ಕೇಂದ್ರ ಸರ್ಕಾರದ ವಿರುದ್ದವೇ ಪ್ರತಿಭಟನೆ ಮಾಡ್ತಾ ಇರೊದು ನಿಜಕ್ಕೂ ತಪ್ಪು ಯೋಧನ ವಿರುದ್ದ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ.