ಧಾರವಾಡ –
ಜಮೀನಲ್ಲಿರುವ ಗಿಡಗಳನ್ನು ಕಡಿಯಲು ಲಂಚ ಕೇಳಿದ ತೋಟಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ. ಹೌದು ಕುಂದಗೋಳದ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪರಶುರಾಮ ಹಲಕರಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಧಾರವಾಡದ ಹೊಟೇಲ್ ಮುಂದೆ ರೈತರಿಂದ 40 ಸಾವಿರ ರೂಪಾಯಿ ತಗೆದುಕೊಳ್ಳುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಅಧಿಕಾರಿ ಬಿದ್ದಿದ್ದಾರೆ. ಕುಂದಗೋಳದ ಮುತ್ತಣಗೌಡ ಎಸ್ ಗಂಗನಗೌಡರ ಇವರ ಜಮೀನನ್ನು ರಸ್ತೆಗಾಗಿ ಸರ್ಕಾರ ಸ್ವಾಧೀನಕ್ಕೊಳಪಡಲಿದೆ. ಜಮೀನಿನಲ್ಲಿದ್ದ ಗಿಡಗಳನ್ನು ಕಡಿಯಲು ಅನುಮತಿ ಅವಶ್ಯಕವಿತ್ತು.ಅನುಮತಿ ನೀಡಲು ಜಮೀನಿನ ರೈತನಿಂದ 40 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು. ಹಣದ ಬೇಡಿಕೆ ಇಟ್ಟು ಇಂದು ಧಾರವಾಡದಲ್ಲಿ ಹಣವನ್ನು ಕೊಡಿ ಅನುಮತಿ ನೀಡುತ್ತೆನೆ ಎಂದಿದ್ದರಂತೆ.ಹೀಗಾಗಿ ಕುಂದಗೋಳದಿಂದ ಹಣದೊಂದಿಗೆ ಧಾರವಾಡಗೆ ಬಂದಿದ್ದ ರೈತ ಮುತ್ತಣಗೌಡ ಅವರಿಂದ ಹಣವನ್ನು ತಗೆದುಕೊಳ್ಳುವಾಗ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಡಿಎಸ್ಪಿ ವೇಣುಗೋಪಾಲ ಅವರ ನೇತ್ರತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನಸ್ಪೇಕ್ಟರ್ ಅಧಿಕಾರಿಗಳಾದ ಬಿ ಎ ಜಾಧವ, ಮಂಜುನಾಥ ಹಿರೇಮಠ ಕಾರ್ಯಾಚರಣೆ ಮಾಡಿ ಲಂಚಕ್ಕೆ ಬಾಯಿ ತಗೆದಿದ್ದ ಅಧಿಕಾರಿಯನ್ನು ಬಲೆಗೆ ಹಾಕಿದ್ದಾರೆ. ಈ ಒಂದು ಕಾರ್ಯಾಚರಣೆಯಲ್ಲಿ ಎಸಿಬಿ ಇಲಾಖೆಯ ಸಿಬ್ಬಂದಿಗಳಾದ ಶ್ರೀಶೈಲ ಕಾಜಗಾರ , ಲೊಕೇಶ ಬೆಂಡಿಕಾಯಿ, ಶಿವಾನಂದ ಕೆಲೂಡಿ, ಗಿರೀಶ ಮನಸೂರ ಸೇರಿದಂತೆ ಹಲವು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.