ಮೈಸೂರು –
ಹೌದು ಅಧ್ಯಾಪಕರ ಪರೀಕ್ಷೆ ಯಲ್ಲಿ ಅಕ್ರಮ ಆರೋಪ ದಲ್ಲಿ ಆರೋಪಿ ಸ್ಥಾನದಲ್ಲಿರುವ ಸೌಮ್ಯ ಹಿನ್ನೆಲೆ ನೋಡಿ ದರೆ ತುಂಬಾ ವಿಚಿತ್ರ ವಾಗಿದೆ ಹೌದು ಮೂಲತಃ ಮೈಸೂ ರಿನ ನಿವಾಸಿಯಾಗಿರುವ ಆರೋಪಿ ಸೌಮ್ಯ ರಂಗಸ್ವಾಮಿ ಶಿವಮ್ಮ ದಂಪತಿಯ ಮೂವರು ಮಕ್ಕಳಲ್ಲಿ ಕೊನೆಯ ಪುತ್ರಿ 2007-2010ರಲ್ಲಿ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು.ಬಳಿಕ ಭೂಗೋಳ ಶಾಸ್ತ್ರ ವಿಭಾಗ ದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದರು.2013 ರಿಂದ 2015 ರವರೆಗೆ ಕೆಆರ್ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.
ನಂತರ ಮಾನಸ ಗಂಗೋತ್ರಿ ಮೈಸೂರು ವಿಶ್ವ ವಿದ್ಯಾಲ ಯಕ್ಕೆ ಸೇರ್ಪಡೆಯಾಗಿದ್ದರು.2019 ರಿಂದ 20ರವರೆಗೆ ಭೂಗೋಳ ಶಾಸ್ತ್ರದಲ್ಲಿ ಪಿಹೆಚ್‌ಡಿ ಅಧ್ಯಯನ ಮಾಡಿದ್ದರು ನಂತರ ಮಾನಸ ಗಂಗೋತ್ರಿ ಕಾಲೇಜಿನಲ್ಲಿ ಅತಿಥಿ ಉಪ ನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು.ಮೈಸೂರಿನಲ್ಲಿ ಪಿಹೆಚ್‌ಡಿ ಅಧ್ಯಯನ ಮಾಡುತ್ತಿದ್ದ ಸೌಮ್ಯಳಿಗೆ ನಾಗರಾಜ್ ಮಾರ್ಗದರ್ಶಕರಾಗಿದ್ದರು.ಹೀಗಾಗಿ ಶಿಷ್ಯೆ ಸೌಮ್ಯಗೆ ಕೆಲ ಪ್ರಶ್ನೆಗಳನ್ನ ಸಿದ್ಧಪಡಿಸಿ ಕಳಿಸುವಂತೆ ಸೂಚಿಸಿದ್ದರಂತೆ.
ಅದರಂತೆ ಸೌಮ್ಯ 17 ಪ್ರಶ್ನೆಗಳನ್ನ ಸಿದ್ಧಪಡಿಸಿ ಕಳುಹಿಸಿ ದ್ದರು.ಈ ಪೈಕಿ 12 ಪ್ರಶ್ನೆಗಳನ್ನ ಪ್ರೊಫೆಸರ್ ನಾಗರಾಜ್ ಯಥಾವತ್ತಾಗಿ ಉಳಿಸಿಕೊಂಡಿದ್ದರು.ಗುರುಗಳಿಗೆ ಕಳಿಸಿದ್ದ ಪ್ರಶ್ನೆಗಳನ್ನ ಪರೀಕ್ಷೆಗೂ ಅರ್ಧ ಗಂಟೆ ಮೊದಲು ಸೌಮ್ಯ ಸ್ನೇಹಿತೆಯರಿಗೆ ಕಳುಹಿಸಿದ್ದರಂತೆ.ಸದ್ಯ ಇದೇ ಆಯಾಮ ದಲ್ಲಿ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.