ಹುಬ್ಬಳ್ಳಿ –
ಸಧ್ಯ ಲಾಕ್ ಡೌನ್ ಹಿನ್ನಲೆಯಲ್ಲಿ ಎಲ್ಲೇಡೆ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟಿಗೆ ಮಾತ್ರ ಅವಕಾಶವಿದೆ. ಇದ ನ್ನು ಮೀರಿ ಕಿರಾಣಿ ಅಂಗಡಿಯೊಂದನ್ನು ಆರಂಭ ಮಾಡಲಾಗಿತ್ತು ಈ ಕುರಿತಂತೆ ಹೇಳಲು ಬಂದ ಪೊಲೀಸ್ ಪೇದೆಯ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಹುಬ್ಬಳ್ಳಿಯ ತಾರಿಹಾಳ ಗ್ರಾಮದಲ್ಲಿ ನಡೆದಿದೆ.

ಹೌದು ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಅವಧಿ ಮುಗಿದ ನಂತರ ಕಿರಾಣಿ ಅಂಗಡಿಯೊಂದು ಆರಂಭ ವಾಗಿತ್ತು ಇದನ್ನು ನೋಡಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯ ಗಿರೀಶ್ ಶ್ರೀಶೈಲ ತಿಪ್ಪನ್ನವರ ಎಂಬುವರು ಕರ್ತವ್ಯದ ಮೇಲಿದ್ದು ಕೂಡಲೇ ಸ್ಥಳ ಕ್ಕೇ ಹೋಗಿ ಕಿರಾಣಿ ಅಂಗಡಿಯನ್ನು ಬಂದ್ ಮಾಡು ವಂತೆ ಹೇಳಿದ್ದಾರೆ.

ಈ ಒಂದು ಸಂದರ್ಭದಲ್ಲಿ ಸ್ಥಳದಲ್ಲಿದ್ದ ನಾಲ್ವರು ಪೊಲೀಸ್ ಪೇದೆಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಅಲ್ಲದೇ ಜೀವ ಬೆದರಿಕೆಯನ್ನು ಹಾಕಿ ನಾಲ್ಕು ಜನರು ಸುತ್ತು ವರೆದು ಹಲ್ಲೆ ಮಾಡಿದ್ದಾರಂತೆ.ಸಾಲದಂತೆ ನೆಲಕ್ಕೆ ಹಾಕಿ ಬಡಿದು ಹೊಡೆದು ಮಾಡಿದ್ದಾರಂತೆ.

ಇನ್ನೂ ಅಲ್ಲಿಂದ ತಪ್ಪಿಸಿಕೊಂಡು ಬಂದ ಪೊಲೀಸ್ ಪೇದೆ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯ ಲ್ಲಿ ಮೇಲಾಧಿಕಾರಿಗಳಿಗೆ ವಿಚಾರವನ್ನು ಗಮನಕ್ಕೆ ತಗೆದುಕೊಂಡು ಬಂದು ದೂರನ್ನು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ನಾಲ್ಕು ಜನ ಆರೋಪಿಗಳನ್ನು ಬಂಧನ ಮಾಡಿದ್ದಾರೆ.

ಪೊಲೀಸ್ ಪೇದೆಯ ಮೇಲೆ ಹಲ್ಲೆಯನ್ನು ಮಾಡಿದ್ದ ತಾರಿಹಾಳ ಗ್ರಾಮದವರಾದ ಈರಪ್ಪ ಹನಮಸಾಗ ರ.ಮಂಜುನಾಥ ಹನುಮಸಾಗರ.ಮಹಾಕೂಟೇಶ ಹನುಮಸಾಗರ.ಸಂಗಮೇಶ ಹನುಮಸಾಗರ ಹೀಗೆ ನಾಲ್ಕು ಜನರನ್ನು ತಂದೆ ಮತ್ತು ಮೂವರು ಮಕ್ಕಳ ನ್ನು ಬಂಧಿಸಿರುವ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ ರು ಜೈಲಿಗೆ ಅಟ್ಟಿದ್ದಾರೆ.