ಹುಬ್ಬಳ್ಳಿ –
ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ಡಿ ದರ್ಜೆಯ ನೌಕರರಿಂದ ಊಟ ಮಾಡಿದ ತಟ್ಟೆ ಯನ್ನು ಸ್ವಚ್ಚತೆ ಮಾಡಿಸಿದ ಘಟನೆ ಹುಬ್ಬಳ್ಳಿಯ ಛಬ್ಬಿ ಗ್ರಾಮದಲ್ಲಿ ಕಂಡು ಬಂದಿತು.

ಛಬ್ಬಿ ಗ್ರಾಮದಲ್ಲಿ ಇಂದು ಕಂದಾಯ ಸಚಿವ ಆರ್ ಅಶೋಕ್ ಗ್ರಾಮ ವಾಸ್ತವ್ಯಕ್ಕೆ ಈಗಾಗಲೇ ಆಗಮಿಸಿ ದ್ದಾರೆ.ಈ ಒಂದು ಕಾರ್ಯಕ್ರಮದಲ್ಲಿ ಅಧಿಕಾರಿ ಗಳನ್ನು ದುರ್ಬಳಕೆ ಮಾಡಿಕೊಂಡ ಇಲಾಖೆಯವರು ಎಂಬ ಆರೋಪ ಕೇಳಿ ಬಂದಿದೆ.

ಕಂದಾಯ ಇಲಾಖೆಯ ಸಿಬ್ಬಂದಿಯನ್ನೇ ಪಾತ್ರೆ ತೊಳೆಯಲು ನೇಮಕ ಮಾಡಿದ್ದಂತೆ ಇಲಾಖೆ ಯವರು ಕಂಡು ಬಂದಿತು.ಅಧಿಕಾರಿಗಳ ಊಟದ ಬಳಿಕ ಪಾತ್ರೆ ತೊಳೆಯುತ್ತಿದ್ದಾರೆ ಡಿ ಗ್ರೂಪ್ ನೌಕಕರು.
ಗ್ರಾಮ ಲೆಕ್ಕಾಧಿಕಾರಿಯ ಸಹಾಯಕರನ್ನೇ ಪಾತ್ರೆ ತೊಳೆಯಲು ಹಚ್ಚಿದ್ದಾರೆ ಮೇಲಾಧಿಕಾರಿಗಳು. ಕಂದಾಯ ಸಚಿವರ ಗ್ರಾಮ ವಾಸ್ತವ್ಯದಲ್ಲೇ ಅಧಿ ಕಾರಿಗಳ ಎಡವಟ್ಟಿನಿಂದಾಗಿ ಪಾತ್ರೆ ತೊಳೆ ಯಲು ನೇಮಕ ಮಾಡಿದ ಮೇಲಾಧಿಕಾರಿಗಳ ನಡೆಗೆ ಅಸಮಾಧಾನವನ್ನು ಗ್ರಾಮಸ್ಥರು ಕೆಲ ಅಧಿಕಾರಿ ಗಳು ವ್ಯಕ್ತಪಡಿಸಿದರು