ಬೆಂಗಳೂರು –
ಹವಾಮಾನ ಇಲಾಖೆಯ ಪ್ರಕಾರ ಇನ್ನೂ ಮಳೆಯು ಹೆಚ್ಚಾಗಲಿದ್ದು ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಸೂಚನೆ ಹಿನ್ನೆಲೆಯಲ್ಲಿ DDPI ಜಿಲ್ಲೆಯ ಶಾಲಾ ಕಾಲೇಜು ಗಳಿಗೆ ರಜೆಯನ್ನು ಘೋಷಣೆ ಮಾಡಿದ್ದಾರೆ.ಹೌದು ಸಾಕಷ್ಟು ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿರುವು ದರಿಂದ ಮಕ್ಕಳು ವ್ಯವಸ್ಥಿತವಾಗಿ ಶಾಲೆಗೆ ಬರುವುದಕ್ಕೆ ಹಾಗೂ ಹೋಗುವುದಕ್ಕೆ ಬಹಳ ತೊಂದರೆಯಾಗಿರು ವುದರಿಂದ ಜಿಲ್ಲಾಧಿಕಾರಿ ರಜೆ ನೀಡುವಂತೆ ಮೌಖಿಕವಾಗಿ ಸೂಚನೆ ನೀಡಿದ್ದಾರೆ
ಹೌದು ಜಿಲ್ಲಾಡಳಿತ ಜಿಲ್ಲಾ ಮಟ್ಟದ ಅಧಿಕಾರಿಗಳು ಎಲ್ಲಾ ಕ್ಷೇತ್ರ ಸಿಬ್ಬಂದಿ ತಮ್ಮ ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಯ ಲ್ಲಿನ ಶಾಲಾ ಮಕ್ಕಳನ್ನು ಸುಸ್ಥಿತಿಯಲ್ಲಿ ಇರುವ ದೃಷ್ಟಿ ಯಿಂದ ಕೆಲವು ಕಡೆ ತರಗತಿ ಕೊಠಡಿಗಳಲ್ಲಿ ಕೂರಿಸಲು ವ್ಯವಸ್ಥೆ ಸರಿ ಇಲ್ಲದಿರುವುದರಿಂದ ಮಕ್ಕಳ ಹಾಗೂ ಸಿಬ್ಬಂ ದಿಯ ಆರೋಗ್ಯದ ಹಿತದೃಷ್ಟಿಯಿಂದ ರಜೆಯನ್ನು ನೀಡಲಾಗಿದೆ.
ಈ ಹಿಂದೆ ಕರ್ನಾಟಕ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದಿಂದ ಆರ್ ನಾರಾ ಯಣಸ್ವಾಮಿ ಚಿಂತಾಮಣಿ ಜಿಲ್ಲಾಧ್ಯಕ್ಷರು M.R.ಸುಬ್ಬಾ ರೆಡ್ಡಿ ಪ್ರಧಾನ ಕಾರ್ಯದರ್ಶಿಗಳು ಗ್ರಾಮೀಣ ಶಿಕ್ಷಕರ ಸಂಘ ಚಿಕ್ಕಬಳ್ಳಾಪುರ ಜಿಲ್ಲೆ ಇವರು ಒತ್ತಾಯ ಮಾಡಿದ್ದರು ಹೀಗಾಗಿ ಸಧ್ಯ ನಾಳೆ ನಾಡಿದ್ದು ರಜೆಯನ್ನು ಘೋಷಣೆ ಮಾಡಿದ್ದು ಈ ಒಂದು ರಜೆಯನ್ನು ಮುಂದೆ ಸರಿದೂಗಿಸಲು ಸೂಚನೆ ನೀಡಲಾಗಿದೆ