ಬೆಂಗಳೂರು –
ಹೌದು ಅದ್ಯಾಕೋ ಏನೋ ರಾಜ್ಯ ಸರ್ಕಾರ ಕೆಲವೊಮ್ಮೆ ತಿಳಿದು ತಿಳಿಯಲಾರದೇ ಎಡವಟ್ಟು ಗಳನ್ನು ಮಾಡುತ್ತಿದೆ ಎಂಬೊದಕ್ಕೆ ಸಧ್ಯ ರಾಜ್ಯದ ಸರ್ಕಾರಿ ಶಾಲೆಗಳಿಗೆ ದೇಣಿಗೆ ಸಂಗ್ರಹಿಸಲು ಸೂಚನೆ ನೀಡಲಾಗಿದೆ ಈವರೆಗೆ ಇಲ್ಲದ ನೀತಿ ನಿಯಮಗಳ ನಡುವೆ ಈಗ ಹೊಸದೊಂದು ಸೂಚನೆಯೊಂದನ್ನು ನೀಡಲಾಗಿದ್ದು ಇದರಿಂ ದಾಗಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಮತ್ತೊಂದು ಹೊರೆ ಬಿದ್ದಂತಾಗಿದ್ದು ಈ ಒಂದು ರಾಜ್ಯ ಸರ್ಕಾರದ ನಿರ್ಧಾರದಿಂದಾಗಿ ಸಾರ್ವಜ ನಿಕ ವಲಯದಲ್ಲಿ ಸಾಕಷ್ಟು ಪರ ವಿರೋಧ ಚರ್ಚೆಯಾಗುತ್ತಿದೆ.
SDMC ಪ್ರತಿ ತಿಂಗಳು 100 ರೂ. ದೇಣಿಗೆ ಸಂಗ್ರಹಿಸಲು ಸರ್ಕಾರದ ಗ್ರೀನ್ ಸಿಗ್ನಲ್ ನೀಡಿದೆ ಈಗಾಗಲೇ ಬೆಲೆ ಏರಿಕೆ ಸೇರಿದಂತೆ ಹತ್ತು ಹಲ ವಾರು ಕಾರಣಗಳಿಂದಾಗಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದರ ಮಧ್ಯೆ ಇದೀಗ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡು ತ್ತಿರುವ ಮಕ್ಕಳ ಪೋಷಕರಿಗೆ ಮತ್ತೊಂದು ಹೊರೆಯನ್ನು ಹೇರಲು ರಾಜ್ಯ ಸರ್ಕಾರ ಮುಂದಾ ಗಿದೆ.ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು ಪ್ರಾಥಮಿಕ ಪ್ರೌಢಶಾಲೆಗಳ ಅಗತ್ಯ ಖರ್ಚು ವೆಚ್ಚಗಳಿಗಾಗಿ ಮಕ್ಕಳ ಪೋಷಕರಿಂದ ಪ್ರತಿ ತಿಂಗಳು ನೂರು ರೂಪಾಯಿ ದೇಣಿಗೆ ಸಂಗ್ರ ಹಿಸಲು ಗ್ರೀನ್ ಸಿಗ್ನಲ್ ನೀಡಲಾಗಿದ್ದು ಆದರೆ ಇದಕ್ಕೆ ಶಿಕ್ಷಣ ತಜ್ಞರು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ರಾಜಕೀಯ ಪಕ್ಷದವರಿಂದ ಹಿಡಿದು ಹಲವರಿಂದ ವಿರೋಧ ವ್ಯಕ್ತವಾಗಿದೆ
ಸಾಮಾನ್ಯವಾಗಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕೂಲಿ ಕಾರ್ಮಿಕರು,ಬಡವರ ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಇಂತಹ ವಿದ್ಯಾರ್ಥಿಗಳ ಪೋಷ ಕರು ದಿನನಿತ್ಯದ ಜೀವನ ನಡೆಸಲು ಬವಣೆ ಪಡುತ್ತಿರುವಾಗ ಅವರಿಂದ ಪ್ರತಿ ತಿಂಗಳು ನೂರು ರೂಪಾಯಿಗಳನ್ನು ದೇಣಿಗೆ ರೂಪದಲ್ಲಿ ಪಡೆಯು ವುದು ಎಷ್ಟು ಸರಿ ಎಂದು ಪ್ರಶ್ನಿಸಲಾಗುತ್ತಿದ್ದು ಸಧ್ಯ ಈ ಕುರಿತಂತೆ ಸರ್ಕಾರ ಸೂಚನೆಯನ್ನು ನೀಡಿದ್ದು ಈ ಒಂದು ಆದೇಶವನ್ನು ಮುಂದುವ ರೆಸುತ್ತಾ ಇಲ್ಲವೇ ವಿರೋಧದ ಹಿನ್ನಲೆಯಲ್ಲಿ ಹಿಂದೆ ಪಡೆದುಕೊಂಡು ನಾನೊಬ್ಬ ಜನ ಸಾಮಾನ್ಯ ಮುಖ್ಯಮಂತ್ರಿ ಎಂದು ಪದೇ ಪದೇ ಹೇಳುತ್ತಿರುವ ಬಸವರಾಜ ಬೊಮ್ಮಾಯಿ ಅವರು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುತ್ತಾ ರೆನಾ ಕಾದು ನೋಡಬೇಕಿದೆ.