ಹುಬ್ಬಳ್ಳಿ –
ಬಂಗಾರ ಪಾಲೀಶ್ ಮಾಡಿಕೊಡುವ ನೆಪದಲ್ಲಿ ಹುಬ್ಬಳ್ಳಿಯ ಹಳೇ ಹುಬ್ಬಳ್ಳಿಯಲ್ಲಿ 9 ತೊಲೆ ಬಂಗಾರವನ್ನು ಎಗರಿಸಿರುವ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ಪ್ರಕರಣ ನಡೆದಿದೆ.

ನಿನ್ನೇಯಷ್ಟೇ ಹುಬ್ಬಳ್ಳಿಯ ಹಳೇ ಹುಬ್ಬಳ್ಳಿಯಲ್ಲಿ ಬಂಗಾರವನ್ನು ಪಾಲೀಶ್ ಮಾಡಿಕೊಡುವ ನೆಪದಲ್ಲಿ ಖದೀಮರು ಒಂಬತ್ತು ತೊಲೆ ಬಂಗಾರವನ್ನು ಕದ್ದುಕೊಂಡು ಎಸ್ಕೇಫ್ ಆಗಿದ್ದರು ಈ ಒಂದು ಪ್ರಕರಣದ ಬೆನ್ನಲ್ಲೇ ಈಗ ಮತ್ತೊಂದು ಪ್ರಕರಣ ಹುಬ್ಬಳ್ಳಿಯ ವರೂರಿನಲ್ಲಿ ನಡೆದಿದೆ.

ನಿವೃತ್ತ ಮುಖ್ಯೋಪಾಧ್ಯಯರಾದ ವಾಸುದೇವ ಜೋಶಿ ಇವರ ಮನೆಯಲ್ಲಿಯೇ ಬಂಗಾರ ಕಳ್ಳತನವಾಗಿದೆ. ಬಂಗಾರವನ್ನು ತೊಳೆದು ಕೊಡೊದಾಗಿ ಹೇಳಿದ ಖದೀಮರು ಕುಟುಂಬದವರನ್ನು ನಂಬಿಸಿ 3 ತೊಲೆ ಬಂಗಾರವನ್ನು ಎಗರಿಸಿಕೊಂಡು ಹೋಗಿದ್ದಾರೆ.

ಹುಬ್ಬಳ್ಳಿಯ ಹಳೇ ಹುಬ್ಬಳ್ಳಿಯಲ್ಲಿ ನಡೆದ ಪ್ರಕರಣದ ಬೆನ್ನಲ್ಲೇ ಮತ್ತೊಂದು ಪ್ರಕರಣ ನಡೆದಿದ್ದು ಒಂದು ಮಾಂಗಲ್ಯ ಸರ ಮತ್ತು ಒಂದು ಕೊರಳಿನ ಚೈನ್ ನ್ನು ಪಾಲೀಶ್ ಮಾಡಿಕೊಡುವ ನೆಪದಲ್ಲಿ ಕಳ್ಳತನವಾಗಿದ್ದು ಇನ್ನೂ ವಿಷಯ ತಿಳಿದ ಗ್ರಾಮೀಣ ಪೊಲೀಸರು ವರೂರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇನಸ್ಪೇಕ್ಟರ್ ರಮೇಶ ಗೋಕಾಕ ಮತ್ತು ಸಿಬ್ಬಂದಿ ಗಳಾದ ನಾರಾಯಣ ಹಿರೇಹೊಳಿ ,ಡೇವಿಡ್ ಸೇರಿದಂತೆ ಸಿಬ್ಬಂದಿಯವರು ಮಾಹಿತಿಯನ್ನು ಪಡೆದುಕೊಂಡು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದು ಇನ್ನೂ ಇತ್ತ ಹಳೇ ಹುಬ್ಬಳ್ಳಿಯ ಮತ್ತು ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಜಂಟಿ ಕಾರ್ಯಾಚರಣೆ ಮಾಡುತ್ತಿದ್ದಾರೆ.
