ಬೆಂಗಳೂರು –
ಈಗಾಗಲೇ ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ಆರಂಭ ಗೊಂಡಿದ್ದು ಒಂದು ವಿಚಾರವಾದರೆ ಈ ಒಂದು ವರ್ಗಾವ ಣೆಯ ಪ್ರಕ್ರಿಯೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅನ್ಯಾಯ ವಾಗುತ್ತಿದೆ ಅನ್ಯಾಯವಾಗಿದೆ ಎಂದು ಸಾವಿರಾರು ಶಿಕ್ಷಕರು ನೊಂದುಕೊಂಡಿದ್ದಾರೆ ಅದರಲ್ಲೂ ಯಾರಿಗೂ ಯಾವ ಇಲಾಖೆಗೂ ಇಲ್ಲದ ಈ ಒಂದು ವರ್ಗಾವಣೆಯ ನೀತಿಯಿಂ ದಾಗಿ ಅಸಮಾದಾನಗೊಂಡಿದ್ದು ಶಿಕ್ಷಕರ ಧ್ವನಿಯಾಗಿ ಕೆಲಸವನ್ನು ಮಾಡಬೇಕಾದ ಸಂಘಟನೆಯ ನಾಯಕರು ಮಾತ್ರ ಮೌನವಾಗಿದ್ದು ಹೀಗಾಗಿ ಅವೈಜ್ಞಾನಿಕವಾದ ವರ್ಗಾವಣೆಯ ನೀತಿಯಿಂದಾಗಿ ಬೇಸತ್ತಿದ್ದು ವರ್ಗಾವಣೆ ಯಿಂದ ವಂಚಿತಗೊಂಡ ಶಿಕ್ಷಕರು ಈಗಾಗಲೇ ತೆರೆ ಮರೆ ಯಲ್ಲಿ ಕಾನೂನು ಹೋರಾಟಕ್ಕೆ ಸಿದ್ದರಾಗಿದ್ದು ಇವತ್ತು ಧಾರವಾಡದ ಹೈಕೊರ್ಟ್ ಮತ್ತು KAT ನಲ್ಲಿ ಅರ್ಜಿಯನ್ನು GPT ಶಿಕ್ಷಕರು ಸಲ್ಲಿಸಲಿದ್ದಾರೆ.
ಹೌದು ಪ್ರಮುಖವಾಗಿ ಈ ಒಂದು ಜಿಪಿಟಿ ಶಿಕ್ಷಕರು ತಮಗೆ ಆಗಿರುವ ನಾಲ್ಕು ಅಂಶಗಳನ್ನು ಮುಂದಿಟ್ಟುಕೊಂಡು ಹೈಕೊರ್ಟ್ ನಲ್ಲಿ ಅರ್ಜಿ ಸಲ್ಲಿಸಲಿದ್ದಾರೆ.ಸಧ್ಯ ರಾಜ್ಯದಲ್ಲಿ 10 ಸಾವಿರ ಜಿಪಿಟಿ ಶಿಕ್ಷಕರಿದ್ದು ಇನ್ನೂ PST ಶಿಕ್ಷಕರು ರಾಜ್ಯದಲ್ಲಿ ಒಂದೂವರೆ ಲಕ್ಷದಷ್ಟು ಇದ್ದಾರೆ. ಜಿಪಿಟಿ ಶಿಕ್ಷಕರ ಎಲ್ಲಾ ಹುದ್ದೆಗಳನ್ನು ಪಿಎಸ್ ಟಿ ಶಿಕ್ಷಕರಿಗೆ ಈ ಒಂದು ವರ್ಗಾವಣೆಯಲ್ಲಿ ನೀಡಿದ್ದಾರೆ. ಇದು ಒಂದು ವಿಚಾರವಾ ದರೆ ಇನ್ನೂ ಇದರೊಂದಿಗೆ ವೇತನ ಶ್ರೇಣಿ,ವೃಂದ ಸ್ಥಾನ ಮಾನ,ವರ್ಗಾವಣೆಯಲ್ಲಿ ಅನ್ಯಾಯ ವಿದ್ಯಾರ್ಹತೆ ಹೀಗೆ ನಾಲ್ಕೈದು ವಿಚಾರದಲ್ಲಿ ಜಿಪಿಟಿ ಶಿಕ್ಷಕರಿಗೆ ಅನ್ಯಾಯವಾಗಿ ದೆಯಂತೆ ಇದೇಲ್ಲವನ್ನು ಮುಂದಿಟ್ಟುಕೊಂಡು ಇಂದು ಸಾಮೂಹಿಕವಾಗಿ ಧಾರವಾಡದ ಹೈಕೊರ್ಟ್ ನಲ್ಲಿ ಅರ್ಜಿ ಯನ್ನು ಸಲ್ಲಿಸಲು ತಿರ್ಮಾನಿಸಿದ್ದು ಪ್ರಮುಖವಾಗಿ ಶಿಕ್ಷಣ ಇಲಾಖೆ ಈ ಒಂದು ವಿಚಾರದಲ್ಲಿ ದೊಡ್ಡ ತಪ್ಪನ್ನು ಮಾಡಿದ್ದು ಹೀಗಾಗಿ ಸಧ್ಯ ತಮಗೆ ಆಗಿರುವ ಅನ್ಯಾಯದ ವಿರುದ್ದ ಸಿಡಿದೆದ್ದಿರುವ ಜಿಪಿಟಿ ಶಿಕ್ಷಕರು ಪಿಎಸ್ ಟಿ ಶಿಕ್ಷಕರಿಗೆ ವರ್ಗಾವಣೆಯಲ್ಲಿನ ಅವಕಾಶವನ್ನು ಹಾಗೇ ಇನ್ನಿತರ ವಿಚಾರಗಳ ಕುರಿತಂತೆ ನ್ಯಾಯಾಲಯದಲ್ಲಿ ಪ್ರಶ್ನೆಯನ್ನು ಮಾಡಿ ಅರ್ಜಿಯನ್ನು ಸಲ್ಲಿಸಲಿದ್ದು ಏನೇನಾ ಗುತ್ತದೆ ಎಂಬುದನ್ನು ಕಾದು ನೋಡಬೇಕು. ಈಗಾಗಲೇ ವರ್ಗಾವಣೆಗೊಂಡ ಪಿಎಸ್ ಟಿ ಶಿಕ್ಷಕರ ಪಾಡೇನು ಏನಾಗು ತ್ತದೆ ಎನೋ ಎಂಬ ಆತಂಕ ಉಂಟಾಗಿದೆ.