ಬೆಂಗಳೂರು –
ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಪದ್ಧತಿ ಸ್ವಾತಂತ್ರ್ಯ ಪೂರ್ವದಿಂದಲೂ ನಡೆದುಕೊಂಡು ಬಂದಿದೆ.ಇದು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆದೇಶ ಮಾಡಿದ್ದಲ್ಲ.ಆದ್ದರಿಂದ ಹಿಂದಿನಿಂದಲೂ ನಡೆದುಕೊಂಡು ಬಂದಿರುವಂತೆ ಶಾಲೆಗಳಲ್ಲಿ ಗಣೇಶ ಉತ್ಸವ ನಡೆಯಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ರಾಜ್ಯದ ಶಾಲೆಗಳಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡು ವುದಾದರೆ ಬೇರೆ ಧರ್ಮಗಳ ಧಾರ್ಮಿಕ ಆಚರಣೆಗೂ ಅವಕಾಶ ನೀಡಬೇಕೆಂದು ಕೆಲ ಸಂಘಟನೆಗಳು ಆಗ್ರಹಿಸಿ ರುವ ಹಿನ್ನೆಲೆಯಲ್ಲಿ ಮಾತನಾಡಿದರು.ಬ್ರಿಟಿಷರ ವಿರುದ್ಧ ಸಮಾಜವನ್ನು ಒಗ್ಗೂಡಿಸಲು ಬಾಲಗಂಗಾಧರ ತಿಲಕರು ಮಾಡಿದ ಕಾರ್ಯಕ್ರಮವಾಗಿದೆ.ಸ್ವಾತಂತ್ರ್ಯ ಪೂರ್ವದಿಂ ದಲೂ ಸಾಮೂಹಿಕವಾಗಿ ಪೂಜಿಸುವ ಪದ್ಧತಿ ನಡೆದು ಕೊಂಡು ಬಂದಿದೆ.ಇದರ ಫಲವಾಗಿಯೇ ಹಿಂದೂಗಳು ಮಾತ್ರವಲ್ಲ ಬೇರೆ ಬೇರೆ ಧರ್ಮೀಯರೂ ಒಟ್ಟಾಗಿ ಸೇರಿ ಗಣೇಶೋತ್ಸವ ಆಚರಿಸುವ ಪದ್ಧತಿಯಿದೆ.ಅದನ್ನು ಮುಂದುವರಿಸಿಕೊಂಡು ಹೋಗಲು ಯಾವುದೇ ಸಮಸ್ಯೆ ಇಲ್ಲ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲಾಗಲಿ ನಾನು ಶಿಕ್ಷಣ ಸಚಿವನಾದ ಮೇಲಾಗಲಿ ಜಾರಿ ಮಾಡಿದ್ದಲ್ಲ.ಈ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಅನೇಕ ಪದ್ಧತಿ,ಆಚರಣೆಗಳು ನಡೆದು ಬಂದಿವೆ.ಮುಂದೆಯೂ ನಡೆದುಕೊಂಡು ಹೋಗು ತ್ತವೆ.ಈಗ ಯಾರೋ ಕೇಳುತ್ತಿದ್ದಾರೆ ಎಂದು ಆಚರಣೆ ಬಿಡೋಕೆ ಆಗಲ್ಲ.ನಾವು ಅದನ್ನು ಆರಂಭಿಸಿಯೂ ಇಲ್ಲ ಮುಕ್ತಾಯ ಮಾಡುವರೂ ಅಲ್ಲ.ಅದು ನಿರಂತರವಾಗಿ ನಡೆಯುತ್ತದೆ ಎಂದರು.