ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದೆ.ಹೌದು ರಜೆಯ ವಿಚಾರದಲ್ಲಿ ನೌಕರರಿಗೆ ಅನುಕೂಲ ಕಲ್ಪಿಸಿದ್ದು ರಾಜ್ಯದ ಸರ್ಕಾರಿ ನೌಕರರ 2022ನೇ ಸಾಲಿನ ಗರಿಷ್ಟ 15 ದಿನಗಳಿಗೆ ಮೀರ ದಂತೆ ಗಳಿಕೆ ರಜೆಯನ್ನು ಆಧ್ಯರ್ಪಿಸಿ ರಜಾ ವೇತನಕ್ಕೆ ನಗದೀಕರಣಗೊಳಿಸಲು ರಾಜ್ಯ ಸರ್ಕಾರ ಅನುಮತಿಐಸಿ ಆದೇಶಿಸಿದೆ.ಈ ಬಗ್ಗೆ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಜಯ್ ಎಸ್ ಕೊರಡೆ ನಡವಳಿಗಳನ್ನು ಹೊರಡಿಸಿದ್ದಾರೆ.
ಸರ್ಕಾರವು 2022ನೇ ಸಾಲಿನ ಬ್ಲಾಕ್ ಅವಧಿಯಲ್ಲಿ ರಾಜ್ಯ ಸರ್ಕಾರಿ ನೌಕರರು ಗರಿಷ್ಠ 15 ದಿನಗಳಿಗೆ ಮೀರದ ಗಳಿಕೆ ರಜೆಯನ್ನು ಆಧ್ಯರ್ಪಿಸಿ ರಜಾ ವೇತನಕ್ಕೆ ಸಮನಾದ ನಗದೀಕರಣ ಸೌಲಭ್ಯ ಪಡೆಯಲು ಯೋಜನೆಯನ್ನು ಜಾರಿಗೊಳಿಸಿ ಆದೇಶಿಸಿದೆ.
ಎಲ್ಲಾ ವೃಂದದ ಅರ್ಹ ಅಧಿಕಾರಿ ನೌಕರರು ಒಂದು ತಿಂಗಳ ಮುಂಚಿತ ನೋಟಿಸ್ ನೀಡಿ ಜನವರಿ 2022 ರಿಂದ ಡಿಸೆಂಬರ್ 2022ರವರೆಗಿನ ಅವಧಿಯಲ್ಲಿ ಅವರ ಇಚ್ಛೆ ಯಂತೆ ಯಾವುದೇ ತಿಂಗಳಿನಲ್ಲಿ ಗಳಿಕೆ ರಜೆ ನಗದೀಕ ರಣದ ಪ್ರಯೋಜನೆ ಪಡೆಯಬಹುದಾಗಿ ಎಂದು ಉಲ್ಲೇಖ ಮಾಡಿ ಆದೇಶವನ್ನು ಮಾಡಲಾಗಿದೆ.