ಧಾರವಾಡ –
ಧಾರವಾಡದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಹಿಂದುಳಿದ ವರ್ಗಗಳ ಘಟಕದ ಜಿಲ್ಲಾ ಧ್ಯಕ್ಷ ಹೇಮಂತ್ ಗುರ್ಲಹೊಸುರ ಮತ್ತೊಂ
ದು ಮಾನವೀಯತೆ ಯ ಕಾರ್ಯವನ್ನು ಮಾಡಿದ್ದಾರೆ. ಹೌದು ಸಧ್ಯ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯು ತ್ತಿರುವ ವಿದ್ಯಾರ್ಥಿಗಳಿಗೆ ಇಂದು ಧಾರವಾಡದಲ್ಲಿ ಶಾಲಾ ಸಾಮಾಗ್ರಿಗಳನ್ನು ವಿತರಣೆ ಮಾಡಿದರು

ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಸಾಮಾಗ್ರಿಗಳ
ಕಿಟ್ ವಿತರಣೆ ಮಾಡಲಾಯಿತು. ಎಸ್.ಎಸ್. ಎಲ್.ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಯಾವುದೇ ಪರಿಸ್ಥಿತಿಯಲ್ಲಿ ಎದೆಗುಂದದೆ ಧೈರ್ಯದಿಂದ ಬರೆಯಬೇಕು ಯಾವುದೇ ಆತಂಕಬೇಡ ಎಂದು ಕಾಂಗ್ರೇಸ್ ಪಕ್ಷದ ಎಐಸಿಸಿ ಸದಸ್ತರಾದ ದೀಪಕ್ ಚಿಂಚೊರೆ ಹೇಳಿದರು.

ನಗರದ ಮರಾಠಾ ಕಾಲೋನಿಯಲ್ಲಿ ಎಸ್.ಎಸ್. ಎಲ್.ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವಿವಿಧ ಪಠ್ಯಕ್ರಮಗಳ ಸಾಮಾಗ್ರಿಗಳ ಕಿಟ್ ಗಳನ್ನು ವಿತರಿಸಿ ಮಾತನಾಡಿ,ಕೊರೋನಾ ಮಹಾಮಾರಿಯಿಂದ ಎಲ್ಲ ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಿವೆ ಆದರೂ ವಿದ್ಯಾರ್ಥಿಗಳು ಯಾವುದಕ್ಕು ಮಾನಸಿಕ ತೋಳಲಾಟಕ್ಕೆ ಹೋಗಬಾರದು ಎಂದರು.

ಇದೇ ಸಂದರ್ಭದಲ್ಲಿ ಹು-ಧಾ ಮಹಾನಗರ ಜಿಲ್ಲಾ ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷರಾದ ಹೇಮಂತ್ ಗುರ್ಲಹೊಸುರ ಮಾತನಾಡಿ, ಎಸ್.ಎಸ್.ಎಲ್.ಸಿ ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯದ ಪ್ರಥಮ ಮೆಟ್ಟಲು ಯಾವುದಕ್ಕೂ ಪರೀಕ್ಷೆಯ ಬಗ್ಗೆ ಹಾಗೂ ಕೊರೋನಾನ ಕುರಿತು ಭಯ ಪಡದೆ ನಿರ್ಭಯ ವಾಗಿ ಪರೀಕ್ಷೆ ಬರೆಯಬೇಕು ಎಂದರು. ಕಾರ್ಯ ಕ್ರಮದಲ್ಲಿ ಓಬಿಸಿ ಉಪಧ್ಯಕ್ಷರಾದ ಭೀಮಣ್ಣ ಹೊನ್ನಕೇರಿ, ಮುತ್ತು ಕೊಟೂರ,ಶಿವು ಚೆನ್ನ ಗೌಡರ, ತಾನಾಜಿ ಶಿರಕೆ ಇನ್ನಿತರರು ಉಪಸ್ಥಿತರಿದ್ದರು.