ಅಣ್ಣಿಗೇರಿ –
ಮಹಾಮಾರಿ ಕೋವಿಡ್ ಗೆ ಧಾರವಾಡ ಜಿಲ್ಲೆಯಲ್ಲಿ ಮತ್ತೊರ್ವ ಆದರ್ಶ ಶಿಕ್ಷಕ ಮರೆಯಾಗಿದ್ದಾರೆ ಹೌದು ಜಿಲ್ಲೆಯ ಅಣ್ಣಿಗೇರಿಯ ಕೊಂಡಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಎಲ್ ವಿ ನಾಯ್ಕರ್ ಕೋವಿಡ್ ನಿಂದಾಗಿ ಮೃತರಾದ ಶಿಕ್ಷಕ ರಾಗಿದ್ದಾರೆ.ಕಳೆದ ಇಪ್ಪತ್ತೈದು ದಿನಗಳ ಹಿಂದೆ ಕರೋ ನಾ ಸೋಂಕಿನಿಂದಾಗಿ ಅನಾರೋಗ್ಯ ಪೀಡಿತರಾದ ಇವರು ಚಿಕಿತ್ಸೆ ಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.ಇಪ್ಪತ್ತೈದು ದಿನಗಳಿಂದ ಚಿಕಿತ್ಸೆ ಯನ್ನು ಪಡೆದುಕೊಳ್ಳುತ್ತಿದ್ದ ಇವರುಮೃತರಾಗಿದ್ದಾರೆ.

ಮೃತರಾದ ಹಿನ್ನಲೆಯಲ್ಲಿ ಕಿಮ್ಸ್ ಆಸ್ಪತ್ರೆಯಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ನಂತರ ಅವರು ಸ್ವತಃ ಊರಾದ ಸಾಸ್ವಿಯಲ್ಲಿ ಕೋವಿಡ್ ಟೀಮ್ ನವರು ಬಂದು ಅಂತಿಮ ಸಂಸ್ಕಾರವನ್ನು ಮಾಡಿದರು. ಇನ್ನೂ ಧಾರವಾಡ ಜಿಲ್ಲೆ ಮತ್ತೊರ್ವ ಆದರ್ಶ ಶಿಕ್ಷಕ ನನ್ನು ಕಳೆದುಕೊಂಡು ಅನಾಥವಾಗಿದ್ದು ಮೃತ ನಾಯ್ಕರ್ ಸರ್ ಗೆ ಶಾಲೆಯ ಶಿಕ್ಷಕರು ಸಮಸ್ತ ಎರಡು ಗ್ರಾಮಗಳ ಗ್ರಾಮಸ್ಥರು ಮಕ್ಕಳು ಜಿಲ್ಲೆಯ ಶಿಕ್ಷಕರು ಭಾವಪೂರ್ಣ ನಮನವನ್ನು ಸಲ್ಲಿಸಿದ್ದಾರೆ.

ಜಗದೀಶ ಬೊಳಸೂರ,ಪವಾಡೆಪ್ಪ, ಗುರು ತಿಗಡಿ, ಎಸ್ ವಾಯ್ ಸೊರಟಿ, ಚಂದ್ರಶೇಖರ್ ಶೆಟ್ರು, ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವರ, ಶಂಕರ ಘಟ್ಟಿ, ಶರಣಪ್ಪಗೌಡ ಆರ್ ಕೆ, ಎಸ್ ಎಫ್ ಪಾಟೀಲ,ಹನುಮಂತಪ್ಪ ಮೇಟಿ ಮಲ್ಲಿಕಾರ್ಜುನ ಉಪ್ಪಿನ, ಶರಣಬಸವ ಬನ್ನಿಗೋಳ, ಹನುಮಂತಪ್ಪ ಬೂದಿಹಾಳ,ಎಂ ವಿ ಕುಸುಮ, ಜಿ, ಟಿ, ಲಕ್ಷ್ಮೀದೇವ ಮ್ಮ, ಕೆ ನಾಗರಾಜ, ರಾಮಪ್ಪ ಹಂಡಿ, ಸಂಗಮೇಶ ಖನ್ನಿನಾಯ್ಕರ, ಜೆ ಟಿ ಮಂಜುಳಾ, ಗೋವಿಂದ ಜುಜಾರೆ, ದಾವಣಗೆರೆ ಸಿದ್ದೇಶ,ನಾಗರಾಜ ಕಾಮನ ಹಳ್ಳಿ, ಹೊಂಬರಡಿ ಆರ್,ಡಿ, ಅಕ್ಬರಲಿ ಸೋಲಾಪು ರ, ರಾಜೀವಸಿಂಗ ಹಲವಾಯಿ,ಕಾಶಪ್ಪ ದೊಡವಾ ಡ, ಸಿದ್ದಣ್ಣ ಉಕ್ಕಲಿ,ಕಿರಣ ರಘುಪತಿ ಚಂದ್ರಶೇಖ ರ್ ತಿಗಡಿ,ಎಂ ಐ ಮುನವಳ್ಳಿ,ಆರ್ ನಾರಾಯಣ ಸ್ವಾಮಿ ಚಿಂತಾಮಣಿ, ಫನೀಂದ್ರನಾಥ, ಡಿ ಎಸ್ ಭಜಂತ್ರಿ, ಬಿ ಎಸ್ ಮಂಜುನಾಥ, ರೇವಣ್ಣ ಎಸ್, ಎಸ್ ಆರ್ ಎಮ್ಮಿಮಠ, ತುಮಕೂರು ರವೀಶ, ಟಗರು ಪಂಡಿತ, ಕಲ್ಪನ ಚಂದನಕರ ರಾಜಶ್ರೀ ಪ್ರಭಾಕರ ಶಿವಲೀಲಾ ಪೂಜಾರ, ಶಿವಮೊಗ್ಗ ಸೋಮಶೇಖರ್,ಕೊಡಗು ರೋಜಿ, ಸುರೇಶ ಅರಳಿ ಅಶೋಕ ಬಿಸೆರೊಟ್ಟಿ, ಮಧುಗಿರಿ ದೇವರಾಜ ಲೀಲಾ ಮಹೇಶ್ವರ ಆರ್ ಐ ಹನಗಿ, ಕೋಲಾರ ಶ್ರೀನಿವಾಸ ಸೇರಿದಂತೆ ಹಲವರು ಮೃತರಾದ ಶಿಕ್ಷಕನಿಗೆ ಭಾವಪೂರ್ಣ ನಮನ ಸಲ್ಲಿಸಿ ಸಂತಾಪ ಸೂಚಿಸಿದ್ದಾರೆ.