ಬೆಂಗಳೂರು –
ಬೆಂಗಳೂರು ನಗರ ಪೊಲೀಸ್ ಕಮೀಷನರ್ ಆಗಿದ್ದ ಭಾಸ್ಕರ್ ರಾವ್ ಆಮ್ ಆದ್ಮಿ ಪಾರ್ಟಿ ಸೇರ್ಪಡೆಗೊಂಡ ಬೆನ್ನಲ್ಲೇ ಈಗ ಮತ್ತೊಬ್ಬ ಅಧಿಕಾರಿ ರಾಜಕೀಯದತ್ತ ಮುಖಮಾಡಿದ್ದಾರೆ.ಹೌದು KAS ಅಧಿಕಾರಿಯಾಗಿದ್ದ ಕೆ.ಮಥಾಯಿ ಮುಂದಿನ ವಾರ ಆಮ್ ಆದ್ಮಿ ಪಾರ್ಟಿಗೆ ಸೇರಲಿದ್ದಾರೆ.KAS ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಕೆ. ಮಥಾಯ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂ ಗಡಿಯವರು.ಸಕಾಲ,ಬಿಬಿಎಂಪಿ ಜಾಹಿರಾತು ವಿಭಾಗದಲ್ಲಿ ಅಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಮುಂದಿನ ವಾರ ಆಮ್ ಆದ್ಮಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಆಗಲಿದ್ದಾರೆ.2020ರಲ್ಲಿ ಸೇವೆಯಿಂದ ನಿವೃತ್ತ ರಾದ ಕೆ. ಮಥಾಯಿ ಅವ್ರು, ತಮ್ಮ ಹಲವಾರು ದಿಟ್ಟ ಕ್ರಾರ್ಯಕ್ರಮಗಳಿಂದ ಸರ್ಕಾರವನ್ನ ಹಲವು ಬಾರಿ ಎದುರುಹಾಕಿಕೊಂಡು ಸುದ್ದಿಯಾಗಿದ್ದರು.

ಕರ್ನಾಟಕದ ಖೇಮ್ಕಾ ಎಂದೇ ಕರೆಯಿಸಿಕೊಂಡಿದ್ದ ಖಡಕ್ ಅಧಿಕಾರಿ ಇವರು.ಕರ್ನಾಟಕವೇ ಏಕೆ ಇಡೀ ದೇಶವೇ ಕಂಡ ಅತ್ಯಂತ ದಕ್ಷ ಪ್ರಾಮಾಣಿಕ ಅಧಿಕಾರಿಯಲ್ಲೊಬ್ಬರಾಗಿದ್ರು ತಮ್ಮ ವೃತ್ತಿಜೀವನದ ಉದ್ದಕ್ಕೂ ದಕ್ಷತೆಯ ಕಾರ್ಯಕ್ಕೆ ಹೆಸರಾದವರು.ಇದಕ್ಕಾಗಿ ಅವರ ಸಿಕ್ಕ ಕೊಡುಗೆ ಸಾಲು ಸಾಲು ವರ್ಗಾವಣೆಗಳು.ತಮ್ಮ ವೃತ್ತಿಜೀವನದ 18 ವರ್ಷ ಗಳಲ್ಲಿ 28 ಕ್ಕೂ ಹೆಚ್ಚು ಬಾರಿ ವರ್ಗಾವಣೆಗೊಂಡವರು ಮಥಾಯ್.ಬಿಡಿಎನ ಭೂಸ್ವಾಧೀನಾಧಿಕಾರಿಯಾಗಿ ನಿವೃತ್ತರಾದರು.


ಮೊದಲ ವರದಿ ಸಲ್ಲಿಕೆಯಾದ ವೇಳೆ 2015ರ ಹಿಂದಿನ ಎಂಟು ವರ್ಷಗಳಲ್ಲಿ ಜಾಹೀರಾತು ಬಾಬ್ತಿನಿಂದ ಎರಡು ಸಾವಿರ ಕೋಟಿ ರೂ.ಆದಾಯ ಪಾಲಿಕೆಗೆ ಕೈಬಿಟ್ಟಿದೆ ಎಂಬು ದನ್ನು ತಿಳಿಸಲಾಗಿತ್ತು.ಇದು ಸತ್ಯಕ್ಕೆ ದೂರ ಎಂಬುದಾಗಿ ಹಲವು ಕಾರ್ಪೊರೇಟರ್‌ಗಳು ಮೂದಲಿಸಿದ್ದರು. ಅಧಿಕಾರಿ ಗಳ ವಲಯದಲ್ಲೇ ಮಥಾಯಿ ವರದಿಗೆ ಕೊಂಕು ಮಾತು ಗಳು ಕೇಳಿಬಂದಿದ್ದವು.ಆಗಿನ ನಗರಾಭಿವೃದ್ಧಿ ಸಚಿವ ರಾಮಲಿಂಗಾರೆಡ್ಡಿ ಕೂಡ ವರದಿ ಕುರಿತಂತೆ ತಮ್ಮದೇ ವ್ಯಾಖ್ಯಾನ ಮಾಡಿದ್ದರೂ ತನಿಖೆಗೆ ಆಸಕ್ತಿ ತೋರಿಸಿದ್ದರು. ಇದು ಬಿಬಿಎಂಪಿ ಚುನಾವಣೆಯಲ್ಲೂ ಪ್ರಸ್ತಾಪಗೊಂಡು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ವಾಕ್ಸಮರಕ್ಕೆ ಕಾರಣ ವಾಗಿತ್ತು.