ಧಾರವಾಡ –
ನವನಗರಲ್ಲಿನ ವಕೀಲರ ಮತ್ತು ಪೊಲೀಸರ ನಡುವಿನ ಗಲಾಟೆಗೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ಈಗಾಗಲೇ ಈ ಒಂದು ಪ್ರಕರಣದಲ್ಲಿ ನವನಗರ ಇನ್ಸ್ಪೆಕ್ಟರ್ ಪ್ರಭು ಸೂರಿನ್ ಅವರನ್ನು ನವನಗರ ಪೊಲೀಸ್ ಠಾಣೆ ಯಿಂದ ಪೊಲೀಸ್ ಆಯುಕ್ತರ ಕಚೇರಿಯ CSB ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.ಇದಕ್ಕೂ ಸುಮ್ಮನಾಗದ ಧಾರವಾಡ ನ್ಯಾಯವಾದಿಗಳು ಇಂದು ಮತ್ತೆ ಸಭೆ ಮಾಡಿದರು. ವಕೀಲರ ಸಂಘದಲ್ಲಿ ನಡೆದ ಸಭೆಯಲ್ಲಿ ಹಲವು ವಿಷಯಗಳ ಕುರಿತು ಚರ್ಚೆಗಳಾದವು.ಇನ್ನೂ ಇದೇ ವೇಳೆ ಇನ್ಸ್ಪೆಕ್ಟರ್ ಪ್ರಭು ಸೂರಿನ ಅವರನ್ನು ವರ್ಗಾವಣೆ ಮಾಡಿದರಷ್ಟೇ ಸಾಲೊದಿಲ್ಲ ಕೂಡಲೇ ಅವರನ್ನು ಅಮಾನತು ಮಾಡಬೇಕು ಹಾಗೇ ತಪ್ಪು ಮಾಡಿದ ಪೊಲೀಸ್ ಸಿಬ್ಬಂದಿ ಗಳ ಮೇಲೂ ಕೂಡಲೇ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಲು ಸಭೆಯಲ್ಲಿ ಒಮ್ಮತದ ಅಭಿಪ್ರಾಯ ಕೇಳಿ ಬಂದಿತು.

ಇನ್ನೂ ಇದೇ ವೇಳೆ ಇನ್ಸ್ಪೆಕ್ಟರ್ ಮತ್ತು ಪೊಲೀಸ್ ಸಿಬ್ಬಂದಿ ಗಳ ಅಮಾನತು ಆಗುವವರೆಗೆ ಯಾವುದೇ ಕಾರಣಕ್ಕೂ ನ್ಯಾಯಾಲಯಕ್ಕೆ ಹಾಜರಾಗದಿರಲು ತಿರ್ಮಾನಿಸಲಾಯಿತು. ಅಲ್ಲದೇ ಮತ್ತೊಂದು ಸುತ್ತಿನ ಸಭೆ ಕರೆದು ಮುಂದಿನ ಹೋರಾಟದ ರೂಪರೇಶೆಗಳ ಕುರಿತು ಚರ್ಚಿಸಲು ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದು ಮತ್ತೆ ಮುಂದಿನ ಸಭೆಯಲ್ಲಿ ಇನ್ಯಾವ ನಿರ್ಣಯಗಳನ್ನು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.ಇನ್ನೂ ಇವೆಲ್ಲದರ ನಡುವೆ ಇನ್ಸ್ಪೆಕ್ಟರ್ ವರ್ಗಾವಣೆ ಮಾಡಿದರು ಸಾಲದಂತೆ ಇನ್ನೂ ತಮ್ಮ ಬೇಡಿಕೆಗಳ ಕುರಿತು ಪಟ್ಟು ಹಿಡಿದಿರುವ ನ್ಯಾಯವಾದಿಗಳು ದೊಡ್ಡ ಮನಸ್ಸು ಮಾಡಿ ಪೊಲೀಸರ ಬಗ್ಗೆ ಸ್ವಲ್ಪ ಮಟ್ಟಿಗೆ ಕರುಣೆ ತೋರಿಸಿ ಇದನ್ನು ಇಲ್ಲಿಗೆ ಮುಗೊಸೊದು ಅವಶ್ಯಕತೆ ಇದೆ.