ಧಾರವಾಡ –
ಧಾರವಾಡದ ಅಕ್ಷರತಾಯಿ ದತ್ತಿದಾನಿ ಶ್ರೇಷ್ಠ ಶಿಕ್ಷಕಿ ಲೂಸಿ ಸಾಲ್ಡಾನ ಕರ್ನಾಟಕದ ಮತ್ತೋರ್ವ ಸಾವಿತ್ರಿ ಪುಲೆ ಎಂದು ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಗೌರವಾ ದ್ಯಕ್ಷರಾದ ಭೀಮಪ್ಪ ಕಾಸಾಯಿ ತಿಳಿಸಿದರು.ಅವರು ಧಾರವಾಡದ ಕೆಲಗೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಲೂಸಿ ಸಾಲ್ಡಾನರವರನ್ನು ಸಂಸ್ಥೆಯ ವತಿಯಿಂದ ಸತ್ಕರಿಸಿ ಮಾತನಾಡಿದರು.
ಬದುಕು ಕಟ್ಟಿಕೊಂಡ ಮೇಲೆ ತಾವಾಯಿತು ತಮ್ಮ ಸಂಸಾರ ವಾಯಿತು ಎನ್ನುವವರ ಮದ್ಯೆ ಲೂಸಿ ಸಾಲ್ಡಾನ ತುಂಬಾ ಆದರ್ಶ ವ್ಯಕ್ತಿ ಏಕೆಂದರೆ ತನಗೆ ಬರುವ ಪಿಂಚಣಿ ಹಣದಲ್ಲಿ ಶೆಕಡಾ ತೊಂಬತ್ತರಷ್ಟನ್ನು ಸರಕಾರಿ ಶಾಲೆಗಳ ಬಡ ಮಕ್ಕಳ ಕಲಿಕೆಗೆ ಮೀಸಲಿಟ್ಟು ಉಳಿದ ಶೇಕಡಾ ಹತ್ತರಷ್ಟು ಹಣದಲ್ಲಿ ತನ್ನ ಜೀವನವನ್ನು ನಿರ್ವಹಿಸುತ್ತಾತನ್ನ ನೌಕರಿ ಜೀವನದಲ್ಲಿ ಕೂಡಿಟ್ಟ ಎಲ್ಲಾ ಹಣವನ್ನು ಜಿಲ್ಲೆ ಮತ್ತು ರಾಜ್ಯದ ಶಾಲೆ, ಕಾಲೇಜುಗಳಿಗೆ 86 ದತ್ತಿಯನ್ನು ನೀಡಿದ್ದಾರೆ ಎಂದರು
ಅದ್ಯಕ್ಷರಾದ ಎಲ್ ಐ ಲಕ್ಕಮ್ಮನವರ ಲೂಸಿ ತಾಯಿ ಯಿಂದ ಅಕ್ಷರದ ಜ್ಞಾನ ಪಡೆದ ಸಾವಿರಾರು ವಿದ್ಯಾರ್ಥಿಗಳ ಪೈಕಿ ನಾನುಬೊಬ್ಬನಾಗಿದ್ದು ನನಗೂ ಸಹ ಲೂಸಿ ತಾಯಿಯ ಆಶೀರ್ವಾದದಿಂದ ಪವಿತ್ರ ಶಿಕ್ಷಕ ಹುದ್ದೆ ಪಡೆದಿರುವೆ ಇಂದಿನ ಈ ನಾಗರೀಕ ಸಮಾಜದಲ್ಲಿ ಇಂತಹ ಅಪರೂಪದ ವ್ಯಕ್ತಿ ಎಂದರು.ಶಂಕರ ದೊಡಮನಿ ಅಶೋಕ ಧಾರವಾಡ,ಸೀತಾ ಚಾಕಲಬ್ಬಿ ರುದ್ರೇಶ ಕುರ್ಲಿ,ಶ್ರೀಮತಿ ಮುಲ್ಲಾ ಜೆ ಎಸ್ ಕಿತ್ತೂರ ಪಿ ಎಸ್ ಕೋಲಾರ, ಮುಂತಾ ದವರು ಇದ್ದರು ಆರ್ ಎಸ್ ಹಿರೇಗೌಡರ ಸ್ವಾಗತಿಸಿ ನಿರೂಪಿಸಿದರು. ಅಶೋಕ ಧಾರವಾಡ ವಂದಿಸಿದರು,