ಧಾರವಾಡ –
ಮಹಾಮಾರಿ ಕೋವಿಡ್ ಗೆ ಧಾರವಾಡ ಜಿಲ್ಲೆಯಲ್ಲಿ ಮತ್ತೊರ್ವ ಶಿಕ್ಷಕ ಬಲಿಯಾಗಿದ್ದಾರೆ.ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ HPS ನ ಸಹ ಶಿಕ್ಷಕ ಅಡಿವೆಪ್ಪ ತಿಪ್ಪಣ್ಣ ಮಾವನೂರು ಸಾವಿಗೀಡಾದ ಶಿಕ್ಷಕರಾಗಿದ್ದಾರೆ

ಕಳೆದ ಮೂರು ನಾಲ್ಕು ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಹಿನ್ನಲೆಯಲ್ಲಿ ಮನೆಯಲ್ಲಿ ಐಸೋಲೇ ಶನ್ ಒಳಗಾಗಿದ್ದರು.ಅಲ್ಲದೇ ಮಿಶ್ರಿಕೋಟಿ ಯಲ್ಲಿ ವೈಧ್ಯರ ಬಳಿ ಚಿಕಿತ್ಸೆ ಪಡೆದುಕೊಂಡಿದ್ದರು.ಇಂದು ಮನೆಯಲ್ಲಿ ತೀವ್ರ ಸ್ವರೂಪದಲ್ಲಿ ಆರೋಗ್ಯ ದಲ್ಲಿ ಏರುಪೇರಾಗಿ ಸಾವಿಗೀಡಾಗಿದ್ದಾರೆ

ಇನ್ನೂ ಅಗಲಿದ ಹಿರಿಯ ಶಿಕ್ಷಕರ ಸಾವಿಗೆ ಕಲಘಟ ಗಿ ತಾಲ್ಲೂಕು ಮತ್ತು ಧಾರವಾಡ ಜಿಲ್ಲೆಯ ಶಿಕ್ಷಕರ ಬಳಗ ಕಂಬನಿ ಮಿಡಿದಿದೆ. ಜೊತೆಯಲ್ಲಿ ಶಿಕ್ಷಕ ಬಂಧುಗಳಾದ S F ಪಾಟೀಲ್,I B ಕಲಭಾವಿ, l I ಲಕ್ಕಮ್ಮನವರ, ಅಶೋಕ ಸಜ್ಜನ ,ಉಪ್ಪಿನ,ಶರಣ ಬಸವ ಸೇರಿದಂತೆ ಹಲವರು ಶಿಕ್ಷಕರು ಸಂತಾಪ ಸೂಚಿಸಿದ್ದಾರೆ