ಧಾರವಾಡ –
ಮಹಾಮಾರಿ ಕೋವಿಡ್ ಗೆ ಧಾರವಾಡ ಜಿಲ್ಲೆಯಲ್ಲಿ ಮತ್ತೊಬ್ಬ ಶಿಕ್ಷಕರು ಸಾವಿಗೀಡಾಗಿದ್ದಾರೆ.ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಹಂಚಿನಾಳ ಗ್ರಾಮದ ಹಿರಿಯ ಪ್ರಾಥಮಿಕ ಕನ್ನಡ ಶಿಕ್ಷಕರಾಗಿರುವ ವಿ ಸಿ ಅಳವಂಡಿ ಮೃತರಾದ ಶಿಕ್ಷಕರಾಗಿದ್ದಾರೆ.ಕಳೆದ ಮೂ ರೂ ನಾಲ್ಕು ದಿನಗಳ ಹಿಂದೆ ಇವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.

ಹೀಗಾಗಿ ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿ ತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದ ಇವರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.ಇ ನ್ನೂ ಅಗಲಿದ ಶಿಕ್ಷಕ ವಿ ಸಿ ಅಳವಂಡಿ ಇವರಿಗೆ ಧಾರ ವಾಡ ಜಿಲ್ಲೆ ಸೇರಿದಂತೆ ನಾಡಿನ ಎಲ್ಲಾ ಶಿಕ್ಷಕ ಬಂಧು ಗಳು ಅದರಲ್ಲೂ ಶಿಕ್ಷಕ ಬಂಧುಗಳಾದ ಎಲ್ ಐ ಲಕ್ಕಮ್ಮನವರ, ಶರಣಬಸವ ಬನ್ನಿಗೊಳ,ಸಂಗ ಮೇಶ ಕನ್ನಿನಾಯ್ಕರ್,ಹೆಚ್ ಎಫ್ ಪಾಟೀಲ,ರವಿ ಬಂಗೇನವರ,ಗೋವಿಂದ ಜುಜಾರೆ ಅಕ್ಬರಅಲಿ ಸೋಲಾಪೂರ,

ರಾಜುಸಿಂಗ್ ಹಲವಾಯಿ, ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ,ಎಸ್ ಎಫ್, ಹನಿಗೊಂಡ,ಅಶೋ ಕ ಸಜ್ಜನ,ರುಸ್ತಂ ಕನವಾಡೆ ಸೇರಿದಂತೆ ಹಲವರು ಭಾವಪೂರ್ಣ ನಮನವನ್ನು ಸಲ್ಲಿಸಿದ್ದಾರೆ.ಸಂತಾಪ ವನ್ನು ಸೂಚಿಸಿದ್ದಾರೆ.ಇನ್ನೂ ಮೃತರಾದ ಶಿಕ್ಷಕರ ಅಂತ್ಯ ಸಂಸ್ಕಾರ ಸ್ವಗ್ರಾಮ ಹಂಚಿನಾಳದಲ್ಲಿ ಇಂದು ಸಂಜೆ ನಡೆಯಲಿದೆ.