ಬೆಂಗಳೂರು –
KSPSTA ಶಿಕ್ಷಕರ ಸಂಘಕ್ಕೆ ವಾರ್ಷಿಕ ಎರಡು ನೂರು ರೂಪಾಯಿ ಸದಸ್ಯತ್ವ ನೀಡಲು ರಾಜ್ಯದಲ್ಲಿ ಶಿಕ್ಷಕರ ವಿರೋಧ ಮುಂದುವರೆದಿದೆ.ಮೊನ್ನೆ ಮೊನ್ನೆ ಯಷ್ಟೇ ಹಿರಿಯ ಶಿಕ್ಷಕರೊಬ್ಬರು ಸದಸ್ಯತ್ವ ಹಣದ ಕುರಿತಂತೆ ಧ್ವನಿ ಎತ್ತಿದ್ದ ಬೆನ್ನಲ್ಲೇ ಗ್ರಾಮೀಣ ಪ್ರಾಥ ಮಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರು ಕೂಡಾ ಪತ್ರ ಬರೆದು ಸದಸ್ಯತ್ವ ಹಣವನ್ನು ವೇತನದಲ್ಲಿ ಕಟಾವಣೆ ಮಾಡಬೇಡಿ ಎಂದು ಪತ್ರವನ್ನು ಬರೆದು ವಿರೋಧ ವನ್ನು ಮಾಡಿದ್ದರು ಇವರಿಬ್ಬರ ಬೆನ್ನಲ್ಲೇ ಈಗ ಮತ್ತೊರ್ವ ಶಿಕ್ಷಕರೊಬ್ಬರು ಸದಸ್ಯತ್ವ ಹಣದ ವಿಚಾರ ಕುರಿತಂತೆ ಧ್ವನಿ ಎತ್ತಿದ್ದಾರೆ ಅಲ್ಲದೇ ಹಣವನ್ನು ಕಟಾವಣೆ ಮಾಡಬೇಡಿ ಎಂದು ಪತ್ರವನ್ನು ಬರೆದಿದ್ದಾರೆ.

ಹೌದು ಗೋವಿಂದರಾಜು ಕೆ ಜುಜಾರೆ ರಾಯನಾಳದ ಪಬ್ಲಿಕ್ ಶಾಲೆಯ ಶಿಕ್ಷಕರು ಹಾಗೂ ಉಪಾಧ್ಯಕ್ಷರು ಗ್ರಾಮೀಣ ಪ್ರಾಥಮಿಕ ಶಾಲೆ ಇವರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಪ್ರತಿವ ರ್ಷ ಶಿಕ್ಷಕರ ವೇತನದಲ್ಲಿ ಪ್ರತಿಯೊಬ್ಬ ಶಿಕ್ಷಕರ ವೇತ ನದಲ್ಲಿ ಕಟಾವಣೆ ಮಾಡುತ್ತಿದ್ದು ನಾನು ಗ್ರಾಮೀಣ ಸಂಘದಲ್ಲಿ ರಾಜ್ಯ ಹಿರಿಯ ಉಪಾಧ್ಯಕ್ಷನಾಗಿದ್ದೇನೆ. ಹೀಗಿರುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ.ರಾಜ್ಯ ಘಟಕ ಬೆಂಗಳೂರ ಇದರ ವಾರ್ಷಿಕ ಸದಸ್ಯತ್ವ ಶುಲ್ಕ ರೂ.ಎರಡನೂರು ನ್ನು ನನ್ನ ವೇತನದಲ್ಲಿ ಕಟಾವಣೆ ಮಾಡಬಾರದೆಂದು ಅಸಮ್ಮತಿ ಪತ್ರವನ್ನು ಹುಬ್ಬಳ್ಳಿ ಗ್ರಾಮೀಣ ವಲಯ ದ ವೇತನ ಸೆಳೆಯುವ ಅಧಿಕಾರಿಗಳಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಂಬಂಧಿಸಿದ ವಿಳಾಸಕ್ಕೆ ಪತ್ರ ತಲುಪಿಸಿ ಕೋರಿಕೊಂಡಿದ್ದೇನೆ.

ಈ ದಿಸೆಯಲ್ಲಿ ನಮ್ಮ ಕ.ಸ.ಗ್ರಾ.ಪ್ರಾ.ಶಾ.ಶಿ.ಸಂಘದ ಸರ್ವ ಸದಸ್ಯರುಗಳು ರಾಜ್ಯಾದ್ಯಂತ ತಮ್ಮ ತಮ್ಮ ಬಿ.ಇ.ಓ.ರವರಿಗೆ ವೈಯಕ್ತಿವಾಗಿ ಲಿಖಿತ ಅಸಮ್ಮತಿ ಪತ್ರ ಸಲ್ಲಿಸಲು ನನ್ನ ವೈಯಕ್ತಿಕ ವಿನಯ ವಿನಂತಿ ಯಾಗಿರುತ್ತದೆ.ಸಂಘ ಸ್ವಾತಂತ್ರ್ಯ ಚಿರಾಯುವಾಗಿ ರುತ್ತದೆ.ಸಂಘಟಕರು ಯಾರ ಮನೆಯ ಆಸ್ತಿಯೂ ಅಲ್ಲ ಎಂದು ಪತ್ರಿಕಾ ಹೇಳಿಕೆಯನ್ನು ಗೋವಿಂದ ಜುಜಾರೆ.ಪ್ರಕಟಣೆ ನೀಡಿದ್ದಾರೆ ಇದರೊಂದಿಗೆ ಆ ಸಂಘದ ವಿರುದ್ದ ಮತ್ತೊರ್ವ ಶಿಕ್ಷಕರು ಸಿಡಿದೆದ್ದಿದ್ದು ನಿಜವಾದ ಕಾರಣ ಏನು ಯಾತಕ್ಕಾಗಿ ಧ್ವನಿ ಎತ್ತಿದ್ದಾ ರೆ ಈ ಕುರಿತಂತೆ ಆ ಸಂಘದವರು ಆತ್ಮಾವಲೋಕನ ಮಾಡಿಕೊಳ್ಳೊದು ಅವಶ್ಯಕವಿದೆ ಇಲ್ಲವಾದರೆ ಬರು ವ ದಿನಗಳಲ್ಲಿ ಈ ಒಂದು ಸಮಸ್ಯೆ ಗಂಭೀರವಾಗ ಲಿದೆ.
