ಹುಬ್ಬಳ್ಳಿ –
ಪೊಟೊ ಶೂಟ್ ಗೆ ಹೋಗಿ ನವಲಗುಂದದ ಕಿರೇಸೂರು ಕಾಲುವೆಯಲ್ಲಿ ಬಿದ್ದಿದ್ದ ಮತ್ತೊಂದು ಯುವಕನ ಶವ ಪತ್ತೆಯಾಗಿದೆ. ಹುಬ್ಬಳ್ಳಿಯ ರಾಮನಗರದ ಒರ್ವ ಯುವತಿ ಸೇರಿದಂತೆ ಐವರು ಕಿರೇಸೂರು ಕಾಲುವೆ ಬಳಿ ಪೊಟೊ ಶೂಟ್ ಗೆ ತೆರಳಿದ್ದರು.
ಜೇನು ನೊಣಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಮುಂದಾಗಿ ಕಾಲುವೆಯಲ್ಲಿ ಬಿದ್ದಿದ್ದರು. ಕೂಡಲೇ ಇಬ್ಬರನ್ನು ರಕ್ಷಣೆ ಮಾಡಿ ನಿನ್ನೆ ಇಬ್ಬರ ಯುವಕರ ಮೃತ ದೇಹವನ್ನು ಹೊರತಗೆಯಲಾಗಿತ್ತು. ಇನ್ನೊಬ್ಬನ ಸುಳಿವು ಸಿಕ್ಕಿರಲಿಲ್ಲ.ಕೊನೆಗೂ ಇಂದು ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಆರಂಭ ಮಾಡಿದ ಪೊಲೀಸರಿಗೆ ಅಗ್ನಿಶಾಮಕ ದಳದ ಟೀಮ್ ಗೆ ನಾಪತ್ತೆಯಾಗಿದ್ದ ಜೋಶಿ ಯುವಕನ ದೇಹ ಸಿಕ್ಕಿತು.
ಕೆನಾಲ್ ನಲ್ಲಿರುವ ಟರ್ನಲ್ ನಲ್ಲಿ ಯುವಕನ ದೇಹ ಸಿಲುಕಿಕೊಂಡಿತ್ತು ಕೇಸರಿನಲ್ಲಿ ಸಿಲುಕಿಕೊಂಡಿದ್ದನ್ನು ಪತ್ತೆ ಮಾಡಿ ಹೊರತಗೆಯಲಾಗಿದೆ. ಇನ್ನೂ ಘಟನೆ ಯಲ್ಲಿ ಮೂವರು ಯುವಕರು ಸಾವಿಗೀಡಾಗಿ ದಂತಾಗಿದೆ. ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮೂರು ದಿನಗಳ ಕಾರ್ಯಾಚರಣೆ ಮುಕ್ತಾಯವಾಗಿದೆ.ಕಾರ್ಯಾಚರಣೆಯಲ್ಲಿ ಗ್ರಾಮೀಣ ಪೊಲೀಸ್ ಇನ್ಸ್ಪೆಕ್ಟರ್ ರಮೇಶ ಗೋಕಾಕ್,PSI ,ಮತ್ತು ಸಿಬ್ಬಂದಿ ಗಳಾದ ನಾರಾಯಣ ಹಿರೇಹೊಳಿ ,ಡೇವಿಡ್,ಸೇರಿದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ತಹಶಿಲ್ದಾರರ ಗ್ರಾಮೀಣ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.