ಹುಬ್ಬಳ್ಳಿ –
ಪ್ರಹ್ಲಾದ್ ಜೋಶಿಯವರೇ ಇದಕ್ಕೆ ಉತ್ತರಿಸಿ ರಜತ್ ಉಳ್ಳಾಗಡ್ಡಿಮಠ ಪ್ರಶ್ನೆ – ಹಲವು ಪ್ರಶ್ನೆ ಗಳೊಂದಿಗೆ ಕೇಂದ್ರ ಸಚಿವರ ಮೇಲೆ ಪ್ರಶ್ನೆಗ ಳೊಂದಿಗೆ ಸಿಡಿದೆದ್ದ ಕೈ ಪಕ್ಷದವರು
ಹೌದು ಹುಬ್ಬಳ್ಳಿ-ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ಎಕ್ಸಪ್ರೆಸ್ ಟ್ರೇನ್ ನ್ನು ಏಕಾಎಕಿಯಾಗಿ ರದ್ದು ಮಾಡಲಾಗಿದೆ.ರೈಲ್ವೆ ಇಲಾಖೆಯ ವಾಣಿಜ್ಯ ವಿಭಾಗದ ದಾಖಲೆಗಳ ಪ್ರಕಾರ ಶೇ.೧೦೦ ಕ್ಕೂ ಹೆಚ್ಚು ಬುಕಿಂಗ್‌ನೊಂದಿಗೆ ಓಡಾತ್ತಿದ್ದ ಈ ಒಂದು ವಿಶೇಷ ರೇಲ್ವೆಯನ್ನು ಸಧ್ಯ ರದ್ದು ಮಾಡಲಾಗಿದೆ.ವಾರದ ಕೊನೆಯ ದಿನಗ ಳಲ್ಲಿ ವೇಟಿಂಗ್ ಲಿಸ್ಟ್‌ನಲ್ಲಿಯೇ ನೂರಾರು ಪ್ರಯಾಣಿಕರು ಉಳಿದಿರುತ್ತಿದ್ದರು.
2019ರ ಲೋಕಸಭೆ ಚುನಾವಣೆಯಲ್ಲಿ ರೈಲ್ವೆ ಇಲಾಖೆಯನ್ನು ಬೇಕಾಬಿಟ್ಟಿಯಾಗಿ ಬಿಜೆಪಿ ಯವರು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಈ ಒಂದು ವಿಚಾರ ಕುರಿತಂತೆ ಕಾಂಗ್ರೇಸ್ ಪಕ್ಷದವರು ಟ್ವೀಟ್ ಮೂಲಕ ಪ್ರಶ್ನೆ ಯನ್ನು ಮಾಡಿದ್ದಾರೆ.ಸಧ್ಯ ದೇಶದಲ್ಲಿ ನಡೆಯುತ್ತಿ ರುವ ಈ ವಿಧಾನಸಭೆ ಚುನಾವಣೆಗಳಿಗೆ ಈ ಒಂದು ಟ್ರೇನ್ ಗಳನ್ನು ಬಳಸಿಕೊಳ್ಳುತ್ತಿದ್ದಾರೆಂತೆ.
ಇದಕ್ಕೊಂದು ತಾಜಾ ಉದಾಹರಣೆ-ಇತ್ತೀಚೆಗೆ ನೈಋತ್ಯ ರೈಲ್ವೆ ಹಲವು ಟ್ರೇನುಗಳನ್ನು ಎಲ್ಲಾ ಸೀಟುಗಳು ಪೂರ್ತಿ ಬುಕ್ ಆಗಿದ್ದರೂ ಕೂಡಾ ಕೊನೆಯ ಕ್ಷಣದಲ್ಲಿ ಟ್ರೇನ್ ಗಳನ್ನು ರದ್ದುಪಡಿ ಸುತ್ತಿ ರುವುದು ಎಂಬ ಆರೋಪವನ್ನು ಕೈ ಪಡೆ ಮಾಡಿದೆ.ಟ್ರೇನ್ ನಂಬರ್: 07339/07340 ಹುಬ್ಬಳ್ಳಿ-ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ಎಕ್ಸಪ್ರೆಸ್ ರೈಲ್ವೆ ಇಲಾಖೆಯ ವಾಣಿಜ್ಯ ವಿಭಾಗದ ದಾಖಲೆಗಳ ಪ್ರಕಾರ ಶೇ.೧೦೦ ಕ್ಕೂ ಹೆಚ್ಚು ಬುಕಿಂಗ್‌ನೊಂದಿಗೆ ಓಡಾಡುತ್ತಿತ್ತು.
ವಾರದ ಕೊನೆಯ ದಿನಗಳಲ್ಲಿ ವೇಟಿಂಗ್ ಲಿಸ್ಟ್‌ನಲ್ಲಿಯೇ ನೂರಾರು ಪ್ರಯಾಣಿಕರು ಉಳಿದಿರುತ್ತಿದ್ದರು.ಹೀಗಿರುವಾಗ ಈಗ ಈ ರೈಲನ್ನು ‘ಲೋ ಆಕುಪೆನ್ಸಿ’ ಕಾರಣ ಕೊಟ್ಟು ಮುಂದಿನ ಆದೇಶದವರೆಗೆ ರದ್ದು ಮಾಡಿದೆ ಎಂದ ಸಂದೇಶವನ್ನು ರೇಲ್ವೆ ಇಲಾಖೆಯವರು ಪ್ರಕಟಣೆ ಮಾಡಿದ್ದಾರೆ.
ವಿಚಿತ್ರ ಎಂದರೆ ಇದೇ ಟ್ರೇನಿನ ರದ್ದತಿಗೆ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಬೇರೆಯದೇ ಕಾರಣ ಕೊಟ್ಟು ರದ್ದತಿಯನ್ನು ಟ್ವೀಟ್ ಮಾಡಿದ್ದಾರೆ.ಅವರ ಪ್ರಕಾರ ಹೊಸ ದುರ್ಗ ರೋಡ್ ರೈಲ್ವೆ ನಿಲ್ದಾಣದಲ್ಲಿ ಮೇಲ್ಸೇ ತುವೆ ನಿರ್ಮಾಣ ನಡೆಯುತ್ತಿರುವುದರಿಂದ ಈ ಟ್ರೇನ್ ನ್ನು ರದ್ದುಪಡಿಸಲಾಗಿದೆ. ಅಧಿಕಾರಿಗಳ ಮಧ್ಯದಲ್ಲಿನ ಈ ಗೊಂದಲದ ನಂತರ CRIS ವೆಬ್‌ಸೈಟ್‌ನಲ್ಲಿ ರೈಲ್ವೆ ಅಧಿಕಾರಿಗಳಿಗೆ ಮಾತ್ರ ಲಭ್ಯವಿದ್ದ ಮಾಹಿತಿ ವಿನಿಮಯದ ವಿಭಾಗವನ್ನು ಕೂಡಾ ಬ್ಲಾಕ್ ಮಾಡಲಾಗಿದೆಯಂತೆ.
ಈ ವಿಷಯವಾಗಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸುಮಾರು ಒಂದೂವರೆ ಲಕ್ಷದಷ್ಟು ನೆಟ್ಟಿಗರು ನೈಋತ್ಯ ರೈಲ್ವೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಈ ಟ್ರೇನಿನ ಹಿಂದೆ-ಮುಂದೆ ಓಡುವ ರಾಣಿ ಚೆನ್ನಮ್ಮ ಎಕ್ಸಪ್ರೆಸ್, ಗೋಲಗುಂ ಬಜ್ ಎಕ್ಸಪ್ರೆಸ್, ಬೆಳಗಾವಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಭರ್ಜರಿ ಜನದಟ್ಟಣೆಯಲ್ಲಿ ಓಡುತ್ತಿ ರುವಾಗ ಇದೊಂದೇ ಟ್ರೇನಿಗೆ ‘ಲೋ ಆಕುಪೆನ್ಸಿ’ ಉಂಟಾಗಲು ಕಾರಣವೇನು ಎಂಬ ಪ್ರಶ್ನೆಯನ್ನು ಕೂಡಾ ಕಾಂಗ್ರೇಸ್ ಪಕ್ಷದ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಪ್ರಶ್ನೆ ಮಾಡಿದ್ದು
ರೈಲ್ವೆಯ ಈ ಕತ್ತರಿ ಪ್ರಯೋಗವನ್ನು ಕನ್ನಡದ ಕೆಲವು ಮಾಧ್ಯಮಗಳು ಶಕ್ತಿ ಯೋಜನೆಯಿಂ ದಾಗಿ ಟ್ರೇನ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿದಿದೆ ಎಂಬ ಸುಳ್ಳು ಸುದ್ದಿಯನ್ನು ಬಿತ್ತರಿಸಿ, ಮೋದಿ ಭಜನೆ ಮಾಡುತ್ತಿವೆ ಎಂದು ಕಾಂಗ್ರೇಸ್ ಪಕ್ಷದವರು ಲೇವಡಿಯನ್ನು ಮಾಡುತ್ತಿದ್ದಾರೆ.
ಇದು ಯಾಕೆ ಹೀಗೆ ಅಂತ ಕೇಳಿದರೆ ಏನು ಮಾಡೋದು ಇದು ರೈಲ್ವೆ ಬೋರ್ಡ್‌ನ ಆದೇಶ.ಕರ್ನಾಟಕದಲ್ಲಿ ನೆಲೆಸಿರುವ ಎಲ್ಲ ರಾಜಸ್ಥಾನಿಯರನ್ನು ಕರೆದೊಯ್ಯಲು ವಿಶೇಷ ಟ್ರೇನ್‌ಗಳನ್ನು ಓಡಿಸುತ್ತಿದ್ದಾರೆ ಎಂದು ರೈಲ್ವೆಯ ಹಲವಾರು ಉನ್ನತ ಅಧಿಕಾರಿಗಳು ತಮ್ಮ ಅಸ ಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.ಕೊನೆಯ ಕ್ಷಣ ದಲ್ಲಿ ಟ್ರೇನುಗಳನ್ನು ರದ್ದುಪಡಿಸುತ್ತಿರುವುದರಿಂದ ಸಾವಿರಾರು ಪ್ರಯಾಣಿಕರು ನಮಗೆ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಾವೂ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೇವೆ ಎನ್ನುತ್ತಿದ್ದಾರಂತೆ ಕರ್ನಾಟಕದ ಬಿ.ಜೆ.ಪಿ. ಸಂಸದರು ಇದನ್ನು ಕೂಡಾ ಉಲ್ಲೇಖವನ್ನು ಮಾಡಲಾಗಿದ್ದು ದಕ್ಷಿಣ ಕರ್ನಾಟಕದ ಬಿ.ಜೆ.ಪಿ. ಸಂಸದರೊಬ್ಬರು ಹೇಳುವಂತೆ ಡಿಸೆಂಬರ್‌ನಲ್ಲಿ ಅಯೋಧ್ಯೆಗೆ ಐದು ವಿಶೇಷ ಟ್ರೇನುಗಳನ್ನು ಓಡಿಸಲೇಬೇಕೆಂಬ ಮೌಖಿಕ ಆದೇಶ ನೈಋತ್ಯ ರೈಲ್ವೆಗೆ ಬಂದಿದೆ.
ಸಿಬ್ಬಂದಿ ಕೊರತೆಯಿಂದ ತತ್ತರಿಸಿರುವ ನೈಋತ್ಯ ರೈಲ್ವೆಯ ಅಧಿಕಾರಿಗಳು ಈಗ ಐದು ರೈಲುಗ ಳನ್ನು ಸುಮಾರು ಒಂದು ತಿಂಗಳವರೆಗೆ ರದ್ದು ಪಡಿಸಲು ಹರಸಾಹಸ ಮಾಡುತ್ತಿದ್ದಾರೆ. ರೈಲ್ಚೆ ಯಲ್ಲಿ ಇಷ್ಟೊಂದು ಪ್ರಮಾಣದ ರಾಜಕೀಯ ಪ್ರವೇಶ ಮತ್ತು ದಬ್ಬಾಳಿಕೆ ಯಾವತ್ತೂ ಆಗಿರ ಲಿಲ್ಲ ಎಂದು ನಿವೃತ್ತಿಯ ಅಂಚಿನಲ್ಲಿರುವ ಅನೇಕ ಅಧಿಕಾರಿಗಳು ಗೊಣಗುತ್ತಿದ್ದಾರೆ ಎಂದಿದ್ದಾರೆ ಕೈ ಪಡೆ.
ಸದಾ ಕಾಲ ಜನದಟ್ಟಣೆಯಿಂದ ಕೂಡಿರುವ 07339/07340 ಹುಬ್ಬಳ್ಳಿ – ಬೆಂಗಳೂರು – ಹುಬ್ಬಳ್ಳಿ ಸೂಪರ್ ಫಾಸ್ಟ್ ಎಕ್ಸಪ್ರೆಸ್ ನ್ನು ನಿಲ್ಲಿಸುವಂತೆ ರೈಲ್ವೆ ಅಧಿಕಾರಿಗಳಿಗೆ ತಮ್ಮ ಅಧಿಕಾರದ ಪ್ರಭಾವ ಬೀರಿ ಸೂಚನೆಯನ್ನು ನೀಡಿದ್ದಾರೆ ರೈಲ್ವೇ ಅಧಿಕಾರಿಗಳು ಕಡಿಮೆ ಜನರು ಪ್ರಯಾಣಿಸುತ್ತಿರುವುದಕ್ಕೆ ರೈಲನ್ನು ಬಂದ್ ಮಾಡಲಾಗಿದೆ ಎಂಬ ಸಬೂಬನ್ನು ನೀಡಿದ್ದಾ ರೆಂತೆ
ವಾಸ್ತವಾಂಶದಲ್ಲಿ ಆನ್ ಲೈನ್ ನಲ್ಲಿ ಟಿಕೆಟ್ ಬುಕಿಂಗ್ ನಲ್ಲಿ ಈಗಲೂ ಸಹ ಟಿಕೆಟ್ ಸಿಗುವುದು ಕಷ್ಟ ಸಾಧ್ಯವಾಗಿದೆ.ತಮ್ಮ ಕ್ಷೇತ್ರದ ಜನರಿಗಿಂತ ರಾಜಕೀಯಕ್ಕಾಗಿ ಅಧಿಕಾರ ಬಳಸುವ ಜೋಶಿ ಯಂತಹ ನಾಯಕರು ನಮಗೆ ಬೇಕೇ ಎಂದು ಯೋಚಿಸುವ ಸಮಯ ಬಂದಿದೆ ಎಂದು ಕಾಂಗ್ರೇಸ್ ಪಕ್ಷದವರು ಪ್ರಶ್ನೆಯನ್ನು ಮಾಡುತ್ತಿ ದ್ದು ಇದಕ್ಕೆ ಉತ್ತರಿಸಿ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೈ ಪಡೆ ಕೇಳುತ್ತಾ ಉತ್ತರಿಸಿ ಎನ್ನುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..