ಬೆಳಗಾವಿ –
ಬೇರೆ ಜಿಲ್ಲೆಗಳ ನೌಕರ ಸಂಘದ ಪದಾಧಿಕಾರಿಗಳ ಮುಂದೆ ಬೆಳಗಾವಿ…. ಬೆಳಗಾವಿ…. ಪದೇ ಪದೇ ಬೆಳಗಾವಿ ಜಿಲ್ಲೆಯ ಪದ ಬಳಸಿ ತುಂಬಾ ಹಗುರವಾಗಿ ಮಾತನಾಡಿ ದ್ದೀರಿ….ನಮ್ಮ ಜಿಲ್ಲೆಯ ಬಗ್ಗೆ ಇಷ್ಟೊಂದು ಮಾತನಾಡಲು ನಿಮಗೆ ಯಾರು ಅಧಿಕಾರ ಕೊಟ್ಟರು…ನಿಮ್ಮನ್ನ ನೀವು ಏನು ಅನಕೊಂಡು ಬಿಟ್ಟಿದೀರಿ…..ಹೀಗೆಂದು ಬೆಳಗಾವಿ ಜಿಲ್ಲೆಯ ಶಿಕ್ಷಕರ ಪರವಾಗಿ ಸಂಘದ ಜಿಲ್ಲಾಧ್ಯಕ್ಷರು ಪ್ರಶ್ನೆ ಮಾಡಿದ್ದಾರೆ.
ನೌಕರ ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ಯವರೇ ದಿನಾಂಕ :06-09-2022 ರಂದು ಬೆಂಗಳೂರಿ ನಲ್ಲಿ ನಡೆದ ತಮ್ಮ ಕಾರ್ಯಕಾರಿಣಿ ಸಭೆಯಲ್ಲಿ ಎನ್. ಪಿ. ಎಸ್ ಸಮಸ್ಯೆ ಕುರಿತು ಮತ್ತು ದಿನಾಂಕ 28-08-2022 ರಂದು ರಾಯಲ್ ಗಾರ್ಡನ್ ನಲ್ಲಿ ನಡೆದ ಬೆಳಗಾವಿ ಎನ್. ಪಿ. ಎಸ್ ಸಭೆಯ ಕುರಿತು ಮತ್ತು ಜಿಲ್ಲೆಯ ಹೆಸರು ಬಳಸಿ ತುಂಬಾ ಹಗುರವಾಗಿ ಮಾತನಾಡಿದ್ದೀರಿ ಶಿಕ್ಷಕರ ಸಂಘದ ವರು ಹೊಟ್ಟೆ ಪಾಡಿಗೆ ಏನಾದರು ಇಂತ ಸಭೆ ಮಾಡುತ್ತಾರೆ ಅಂತಾ ಮಾತನಾಡಿದ್ದೀರಿ ನೌಕರ ಸಂಘದ ರಾಜ್ಯಾಧ್ಯಕ್ಷ ಹುದ್ದೆಯಲ್ಲಿದ್ದ ತಾವು ಈ ರೀತಿ ತಮ್ಮ ಕಾರ್ಯಕಾರಿಣಿ ಯಲ್ಲಿ ಮಾನಸಿಕ ಸಂಯಮ ಕಳೆದುಕೊಂಡಂತೆ ವರ್ತಿ ಸಿರುತ್ತಿರಿ.ತಮ್ಮದೇ ವೃಂದ ಸಂಘದವರನ್ನು ತಾವು ಅವ ಮಾನಿಸುವದು ತಮ್ಮ ಹುದ್ದೆಗೆ ಶೋಭೆ ತರುತ್ತಾ. ಅಹಂಕಾ ರದ ತಮ್ಮ ಮಾತು ಆರುವ ದೀಪ ಪ್ರಜ್ವಲಿಸಿದಂತೆ ಅನಿ ಸುತ್ತಿದೆ….?
ಯಾಕೇ ಶಿಕ್ಷಕರ ಸಂಘಟನೆ ಬೆಳಗಾವಿಯಲ್ಲಿ ಎನ್. ಪಿ. ಎಸ್ ಕುರಿತು ಹೋರಾಟ ಮಾಡಬಾರದೇ..? ನೀವು ಮಾಡಲ್ಲ ಮಾಡೋರನ್ನು ಬಿಡಲ್ಲ….
ಎಲ್ಲ ತಾಲೂಕಾ ಮತ್ತು ಜಿಲ್ಲಾ ಅಧ್ಯಕ್ಷರಿಗೆ ಅವರನ್ನು ಕಿತ್ತಾಕಿ… ಪೋರ್ಸ್ ಬಳಸಿ.. ಬೆಳಿಲಿಕ್ಕೆ ಬಿಡಬೇಡಿ ಅನ್ನೋ ಪದ ಬಳಸುತ್ತಿರಿ…. ನೀವು ನೌಕರ ಸೇವೆ ಮಾಡಲು ಈ ಹುದ್ದೆಗೆ ಬಂದಿದ್ದಿರೋ ಅಥವಾ ಗುಂಡಾಗಿರಿ ಮಾಡಲು ಬಂದಿದ್ದಿರೋ….ಉನ್ನತ ಹುದ್ದೆ ಸಿಕ್ಕಿದೆ ಮತ್ತೊಬ್ಬರನ್ನು ಗೌರವಿಸೋ ಹವ್ಯಾಸ ಬೆಳಿಸಿಕೊಳ್ಳಿರಿ…ಯಾಕ್ರೀ ಇಡೀ ರಾಜ್ಯದ ಎಲ್ಲ ನೌಕರರು ನಿಮ್ಮ ಹತೋಟಿಯಲ್ಲೇ ಇರಬೇಕಾ…..
ಓಪನ್ ಆಗಿ ಹೇಳ್ತಿರಿ ಅವರನ್ನ ಕಿತ್ತಾಕಿ ಅಂತಾ ಈಕಡೇ ಯವರೇನು ನಿಮ್ಮ ಹಿತ್ತಲಲ್ಲಿ ಬೆಳೆದ ಪಾರ್ತೇನಿಯಂ ಕಸಾನಾ….ಕಿತ್ತು ಹಾಕಲು…..
ಬೆಳಗಾವಿ ಜಿಲ್ಲೆಯನ್ನು… ಎನ್. ಪಿ. ಎಸ್ ಶಿಕ್ಷಕರನ್ನು.. ಬೆಳಗಾವಿ ಜಿಲ್ಲಾ ಘಟಕ ಮತ್ತು ಎಲ್ಲಾ ತಾಲೂಕಿನ ಅಧ್ಯಕ್ಷರು /ಪ್ರಧಾನ ಕಾರ್ಯದರ್ಶಿಗಳು/ಪದಾಧಿಕಾರಿಗ ಳನ್ನು ಮತ್ತು ಹಿರಿಯರನ್ನು ಅವಮಾನಿಸಿದ್ದಿರಿ….ಶಿಕ್ಷಕ ಸಂಘದವರು ಹೊಟ್ಟೆ ಪಾಡಿಗಾಗಿ ಏನಾದರೂ ಮಾಡು ತ್ತಾರೆ ಅವರನ್ನು ಕಿತ್ತು ಹಾಕಿರಿ ಅಂತಾ ಅವಿವೇಕದ/ಅತೀ ರೆಕದ ಪದಗಳನ್ನು ಬಳಸಿದ್ದೀರಿ….ತಾವು ಹೊಟ್ಟೆ ಪಾಡಿಗೆ ಶಿವಮೊಗ್ಗದಿಂದ ಬೆಂಗಳೂರು ಬಂದಿರುವಿರಾ? ಅಂತಾ ಕೇಳಿದರೆ ನಿಮ್ಮ ಉತ್ತರ ಏನಿದೆ…? ನಾವು ಸೇವೆ ಮಾಡಲು ಸಂಘಕ್ಕೆ ಬಂದಿದ್ದೀವಿ…ಯಾರು ಯಾವ ಉದ್ದೇಶಕ್ಕಾಗಿ ಬಂದಿರುತ್ತಾರೋ ಆ ಪದಗಳು ಅವರ ಬಾಯಿಂದ ಉಚ್ಚರಿಸುತ್ತವೆ…ಅದಕ್ಕೆ ನಿಮ್ಮ ಈ ಮಾತನ್ನು ವಯಕ್ತಿಕ ನಾನು ಕಠೋರವಾಗಿ ಕಂಡಿಸುತ್ತೇನೆ..
ತಾವು ಆಡಿದ ಈ ಮಾತಿಗೆ ಸಮಸ್ತ ಬೆಳಗಾವಿ ಜಿಲ್ಲೆಯ ಶಿಕ್ಷಕರನ್ನು ಮತ್ತು ಶಿಕ್ಷಕರ ಸಂಘವನ್ನು ಕ್ಷಮೆ ಯಾಚಿಸ ಲೇಬೇಕು…
ಮಾಡುವ ಕೆಲಸದ ಕಡೆ ಜಾಸ್ತಿ ಸಮಯ ಕೊಡೋದು ಬಿಟ್ಟು…ಇತ್ತಿತ್ತಲಾಗಿ ನಿಮ್ಮ ಸಮಯವನ್ನೆಲ್ಲಾ ಬೇರೆಯ ವರನ್ನು ಹತ್ತಿಕ್ಕಲು ಬಳಸುತ್ತಿದ್ದೀರಿ ಅನಿಸುತ್ತಿದೆ.ತಾವು ನೌಕರ ಸಂಘದ ರಾಜ್ಯಾಧ್ಯಕ್ಷರು ಜನಪ್ರತಿನಿಧಿಗಳಲ್ಲ.. ತಾವು ನೌಕರರ ಸೇವಕರು..ಸಂಘದ ಪಾಳೆಗಾರರು ತಾವಲ್ಲ ಎಂಬುದನ್ನು ಮತ್ತೊಮ್ಮೆ ಈ ಮೂಲಕ ಮರು ಜ್ಞಾಪಿಸುತ್ತಿದ್ದೇನೆ.
ಕೆ.ಎಸ್.ರಾಚಣ್ಣವರ…..ಕ. ರಾ.ಪ್ರಾ.ಶಾ.ಶಿ ಸಂಘ ಜಿಲ್ಲಾ ಘಟಕ ಬೆಳಗಾವಿ
ಈ ಒಂದು ಸಂದೇಶವನ್ನು ಯಥಾವತ್ತಾಗಿ ಪ್ರಸಾರ ಮಾಡಲಾಗಿದೆ.