ಧಾರವಾಡ –
ತೈಲ ದರ ಏರಿಕೆಗೆ ಖಂಡನೆ ವ್ಯಕ್ತವಾಗಿದೆ.ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಈ ಒಂದು ದರವನ್ನು ಖಂಡಿಸಿ ಧಾರವಾಡದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೇಸ್ ದಿಂದ ಮನವಿ ಯನ್ನು ಸಲ್ಲಿಸಲಾಯಿತು.ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಹೇಮಂತ ಗುರ್ಲಹೊಸುರ ನೇತ್ರತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಲಾಯಿತು. ದಿನದಿಂದ ದಿನಕ್ಕೆ ತೈಲ ಬೆಲೆ ನಾಗಾಲಾಟೊದಿಂದ ಏರಿಕೆಯಾಗುತ್ತಿದೆ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಕೂಡಲೇ ಈ ಕುರಿತಂತೆ ಸೂಕ್ತವಾದ ಕ್ರಮವನ್ನು ಕೈಗೊಳ್ಳು ವಂತೆ ಹೇಮಂತ ಗುರ್ಲಹೊಸುರ ಮತ್ತು ಹಲವರು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಿದರು.

ಈ ಒಂದು ಸಂದರ್ಭದಲ್ಲಿ ಆನಂದ ಸಿಂಗನಾಥ, ಅಶೋಕ ಗುಡಿ,ಅಭಿಜಿತ ಮಹಾಲೆ,ಸೇರಿದಂತೆ ಹಲವರು ಪಾಲ್ಗೊಂಡು ಬೆಲೆ ಏರಿಕೆಯನ್ನು ಖಂಡಿಸಿ ಕೂಡಲೇ ಸೂಕ್ತವಾದ ಕ್ರಮವನ್ನು ಕೈಗೊಂಡು ಜನ ಸಾಮಾನ್ಯರಿಗೆ ಹೊರೆಯನ್ನು ತಪ್ಪಿಸುವಂತೆ ಒತ್ತಾ ಯವನ್ನು ಮಾಡಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿಯನ್ನು ರವಾನೆ ಮಾಡಿ ದರು.