ಮರಾಠಾ ಸಮುದಾಯದ ಶಂಕರ ಶೇಳಕೆ ಗೆ ಮೇಯರ್ ಸ್ಥಾನ ನೀಡಿ ಮಾಜಿ CM ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮರಾಠಾ ಸಮುದಾಯದಿಂದ ಮನವಿ…..

Suddi Sante Desk

ಹುಬ್ಬಳ್ಳಿ –

ಧಾರವಾಡ ಮರಾಠಾ ವಿದ್ಯಾ ಪ್ರಸಾರಕ ಮಂಡಳಿ ಮತ್ತು ಮುಖಂಡರಿಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮರಾಠಾ ಸಮುದಾಯದ ಪಾಲಿಕೆಯ ಸದಸ್ಯ ಶಂಕರ ಶೇಳಕೆ ಅವರಿಗೆ ಮೇಯರ್ ಸ್ಥಾನವನ್ನು ನೀಡುವಂತೆ ಹುಬ್ಬಳ್ಳಿ ಯಲ್ಲಿ ಒತ್ತಾಯವನ್ನು ಮಾಡಲಾಯಿತು.ಹೌದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಆಗಿದರಿಂದ ಈ ಭಾರಿ ಮೇಯರ್ ಸ್ಥಾನದ ಆಕಾಂಕ್ಷಿ ನಮ್ಮ ಸಮಾಜದ ಶಂಕರ ಶೇಳಕೆ ಅವರಿಗೆ ಮೇಯರ್ ಸ್ಥಾನ ನೀಡಿ ಎಂದು ಮನವಿ ನೀಡಿ ಒತ್ತಾಯವನ್ನು ಮಾಡಲಾಯಿತು.

ಹುಬ್ಬಳ್ಳಿಯಲ್ಲಿ ಕೆಂದ್ರ ಸಚಿವರಾದ ಪ್ರಹ್ಲಾದ ಜೋಶಿ ಹಾಗು ಮಾಜಿ ಮುಖ್ಯಮಂತ್ರಿ ಗಳಾದ‌ ಜಗದೀಶ್ ಶೆಟ್ಟರ್ ಇವರಿಗೆ ಮನವಿ ಸಲ್ಲಿಸಲಾಯಿತು ಇದೇ ಸಂದರ್ಭದಲ್ಲಿ ಅಧ್ಯಕ್ಷ ರಾದ ಮನೋಹರ ಮೋರೆ,ಉಪಾಧ್ಯಕ್ಷರಾದ ಯಲ್ಲಪ್ಪ ಚವಾಣ,ಸುಭಾಷ್ ಶಿಂಧೆ ,ಸುಭಾಸ ಪವಾರ,ರಾಜು ಕಾಳೆ ಸಂತೋಷ ಬಿರಜೆನವರ,ದತ್ತಾ ಮೋಟೆ,ವಿಠ್ಠಲ ಚವಾಣ, ಶಿವಾಜಿ ಸೂರ್ಯವಂಶಿ ,ತಾನಾಜಿ ರೋಖಡ,ಲೋಕೇಶ್ ಚವಾಣ,ಪರುಶರಾಮ ವಾಡಕರ,ಲಾಡ,ನಾರಾಯಣ ಹುಬ್ಬಳ್ಳಿ,ಸುಳ್ಳದ,ಸೇರಿದಂತೆ ಎಲ್ಲಾ ಮರಾಠ ಸಮಾಜದ ಹಿರಿಯರು ಮತ್ತು ಯುವಮಿತ್ರರು ಪಾಲ್ಗೊಂಡಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.