ಕಲಬುರಗಿ –
ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ ಹಿನ್ನೆಲೆಯಲ್ಲಿ ಶಿಕ್ಷಕರೊಬ್ಬರ ಮೇಲೆ ಶ್ರೀರಾಮಸೇನೆ ದೂರು ದಾಖಲಿಸಿದೆ.ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದಲ್ಲಿ ಇರುವ ಸರ್ಕಾರಿ ಉರ್ದು ಪ್ರೌಡ ಶಾಲೆ ಶಿಕ್ಷಕ ಮೊಹಮ್ಮದ್ ಅಲಿ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ.
ಎಸ್ ಎಸ್ ಎಲ್ ಸಿ ಪರೀಕ್ಷೆ ವೇಳೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು.ಹೀಗಾಗಿ ಶಿಕ್ಷಕ ಅಲಿ ವಿರುದ್ಧ ಜೇವರ್ಗಿ ಶ್ರೀರಾಮಸೇನೆ ತಾಲೂಕು ಅಧ್ಯಕ್ಷ ನಿಂಗನಗೌಡ ಪಾಟೀಲ್ ದೂರು ನೀಡಿದ್ದಾರೆ.ಅಲ್ಲದೆ ಶಿಕ್ಷಕ ಮೊಹಮ್ಮದ್ ಅಲಿ ಅಮಾನತ್ತು ಮಾಡುವಂತೆ ಆಗ್ರಹಿಸಿದ್ದಾರೆ.