ಶಿಕ್ಷಕರಿಗೆ ಸೇವಾ ಸೌಲಭ್ಯಗಳನ್ನು ಒದಗಿಸಿ – ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಗುರು ತಿಗಡಿ ನೇತೃತ್ವದಲ್ಲಿ DDPI ಗೆ ಮನವಿ…..

Suddi Sante Desk

ಧಾರವಾಡ –

ಶಿಕ್ಷಕರಿಗೆ ಸೇವಾ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಧಾರವಾಡ ದಲ್ಲಿ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಡಿಡಿಪಿಐ ಅವರಿಗೆ ಮನವಿ ನೀಡಲಾಯಿತು.ರಾಜ್ಯಾಧ್ಯಕ್ಷ ಗುರು ತಿಗಡಿ ನೇತೃತ್ವ ದಲ್ಲಿ DDPI ಗೆ ಮನವಿ ನೀಡಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯ ವನ್ನು ಮಾಡಲಾಯಿತು.ರಾಜ್ಯ ಸರಕಾರಿ ಪ್ರಾಥ ಮಿಕ ಶಾಲಾ ಶಿಕ್ಷಕರ ಸಂಘ(ರಿ),ಧಾರವಾಡ ಜಿಲ್ಲಾ ಘಟಕ ಧಾರವಾಡ ಇವರ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್ ಎಸ್ ಕೆಳದಿಮಠ ಇವರಿಗೆ ಶಿಕ್ಷಕರ ಸೇವಾ ಸೌಲಭ್ಯ ಗಳನ್ನು ಒದಗಿಸಿಕೊಡುವ ಕುರಿತಾಗಿ ಸುದೀರ್ಘವಾದ ಮನವಿಯನ್ನು ಅರ್ಪಿಸಲಾ ಯಿತು

ಬೇಡಿಕೆಗಳ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿ ಶಿಕ್ಷಕರ ಸೇವಾ ಸೌಲಭ್ಯಗಳನ್ನು ಒದಗಿಸಿಕೊಡಲು ಕೂಡಲೇ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.ಹಾಗೂ ಸಂಬಂಧಿಸಿದ ಜಿಲ್ಲೆಯ ಎಲ್ಲ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾರ್ಗದರ್ಶನ ನೀಡಲಾಗುವುದೆಂದರುಈ ಸಂದರ್ಭದಲ್ಲಿ ಸಂಘದ ನಿಯೋಗದಲ್ಲಿ,ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಗುರು ವಾಯ್ ತಿಗಡಿ,ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಎಸ್ ಘಟ್ಟಿ, ರಾಜ್ಯಕೋಶಾಧ್ಯಕ್ಷರಾದ ಎಂ ಎನ್ ಸತ್ತೂರ , ಹಾಗೂ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷರಾದ ಆರ್ ಎಸ್ ಹಿರೇಗೌಡರ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್ ಬಿ ಶಿವಸಿಂಪಿ,ಜಿಲ್ಲಾ ಗೌರವಾಧ್ಯಕ್ಷರಾದ ಆರ್ ಬಿ ಮಂಗೋಡಿ, ಧಾರವಾಡ ತಾಲೂಕ ಘಟಕದ ಕಾರ್ಯದರ್ಶಿಗಳಾದ ಚಂದ್ರು ವೈ ತಿಗಡಿ,ಕೋಶಾಧ್ಯಕ್ಷರಾದ ಸಿ ಎಂ ಹೂಲಿ, ಗೌರವಾಧ್ಯಕ್ಷರಾದ ಎ ಎಚ್ ನದಾಫ್,ರಾಜ್ಯ ಎನ್ ಪಿ ಎಸ್ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಹಾಗೂ ಧಾರವಾಡ ಶಿಕ್ಷಕರ ಸಹಕಾರಿ ಸಂಘದ ನೂತನ ನಿರ್ದೇಶಕರಾದ ರಾಜು ಮಾಳವಾಡ,ಧಾರವಾಡ ಶಹರ ಘಟಕದ ಕಾರ್ಯದರ್ಶಿಗಳಾದ ಆಯ್ ಹೆಚ್ ನದಾಫ, ಹುಬ್ಬಳ್ಳಿ ಶಹರ ಘಟಕದ ಕಾರ್ಯದರ್ಶಿಗಳಾದ ಹೇಮನಗೌಡ ಬದ್ನೂರ,ಧಾರವಾಡ ಶಿಕ್ಷಕರ ಸಹಕಾರಿ ಸಂಘದ ನೂತನ ನಿರ್ದೇಶಕರು ಹಾಗೂ ಯುವ ಧುರೀಣರಾದ ಅಯ್ಯಪ್ಪ ಮೊಖಾಶಿ,ನೂತನವಾಗಿ ಸಂಘಕ್ಕೆ ಸೇರ್ಪಡೆಗೊಂಡ ಯುವ ಧುರೀಣರಾದ ಎಂ ಡಿ ಹೊಸಮನಿ,ಧಾರವಾಡ ಶಹರ ಘಟಕದ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಅರಮನಿ,ಜಿಲ್ಲಾ ಮುಖ್ಯೋಪಾಧ್ಯಾ ಯರ ಸಂಘದ ಕಾರ್ಯದರ್ಶಿಗಳು ಶ್ರೀಮತಿ ಮಹಾದೇವಿ ದೊಡ್ಡಮನಿ ಹಾಗೂ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿಗಳಾದ ಶ್ರೀಮತಿ ಶಾರದಾ ಎನ್ ಶಿರಕೋಳ ಮತ್ತಿತರು ನಿಯೋಗದಲ್ಲಿ ಉಪಸ್ಥಿತರಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.