ಧಾರವಾಡ –
ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗ ವರದಿ ಕುರಿತು ಬರುವ ಬಜೆಟ್ ನಲ್ಲಿ ಪ್ರಸ್ತಾಪ ಮಾಡುವ ವಿಚಾರ ಕುರಿತು ಆಯೋಗದ ವರದಿ ಅನುಷ್ಠಾನ ಹೋರಾಟ ಸಮಿತಿಯವರು ಶಾಸಕ ಅಮೃತ ದೇಸಾಯಿಯವರಿಗೆ ಮನವಿ ನೀಡಿದರು.

ಧಾರವಾಡದಲ್ಲಿ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರಿಗೆ ಮನವಿ ನೀಡಿದರು.

ಸದಾಶಿವ ಆಯೋಗದ ವರದಿ ಅನುಷ್ಠಾನ ಹೋರಾಟ ಸಮಿತಿಯ ಇಪ್ಪತ್ತಕ್ಕೂ ಹೆಚ್ಚು ಮುಖಂಡರು ಕಾರ್ಯಕರ್ತರು ಸಮಾಜದ ಮುಖಂಡರು ಶಾಸಕ ಅಮೃತ ದೇಸಾಯಿ ಅವರಿಗೆ ಮನವಿ ನೀಡಿದರು.

ಶಾಸಕರ ನಿವಾಸದ ಮುಂದೆ ಮನವಿ ನೀಡಿ ಬರುವ ಅಧಿವೇಶನದಲ್ಲಿ ಈ ಕುರಿತು ಪ್ರಸ್ತಾಪ ಮಾಡಬೇಕು ಹಾಗೇ ಈ ಮೂಲಕ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಸಮಿತಿಯವರು ಒತ್ತಾಯವನ್ನು ಮಾಡಿದರು.

ಮಾರುತಿ ಹಾಲರವಿ,ಪರಶುರಾಮ ಪೂಜಾರ, ಜಗದೀಶ್ ದೊಡಮನಿ,ಮಾರುತಿ ಹಾಲರವಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಸಮಿತಿಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.