ಬೆಂಗಳೂರು –
ಆತ್ಮೀಯ ವರ್ಗಾವಣೆ ವಂಚಿತ ಶಿಕ್ಷಕರಲ್ಲಿ ಈ ಮೂಲಕ ಮನವಿ ದಿನಾಂಕ 18- 4 -2022 ರ ಸೋಮವಾರದಂದು ಸರ್ಕಾರಿ ನೌಕರರ ಭವನ.ಕಬ್ಬನ್ ಪಾರ್ಕ್.ಬೆಂಗಳೂರು ಇಲ್ಲಿ ಬೃಹತ್ ಸಂಖ್ಯೆಯಲ್ಲಿ ವರ್ಗಾವಣೆ ವಂಚಿತ ಶಿಕ್ಷಕ ರೆಲ್ಲರೂ ಸೇರಿ ಸರ್ಕಾರಕ್ಕೆ ನಮ್ಮ ಸಮಸ್ಯೆಗಳನ್ನು ಮತ್ತೊಮ್ಮೆ ಮನವರಿಕೆ ಮಾಡಿಕೊಡುವ ಹಾಗೂ ONE TIME SETTLEMENT ಪಡೆದೇ ತೀರುವ ಸಲವಾಗಿ ನಮ್ಮ ನಡೆ ಬೆಂಗಳೂರು ಕಡೆ ಎಂಬ ಬೆಂಗಳೂರು ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ದಯಮಾಡಿ ಎಲ್ಲಾ ಆತ್ಮೀಯ ಶಿಕ್ಷಕರು ಈ ಒಂದು ಹೋರಾಟದಲ್ಲಿ ಬೃಹತ್ ಪ್ರಮಾಣದಲ್ಲಿ ಪಾಲ್ಗೊಳ್ಳಬೇಕೆಂದು ಈ ಮೂಲಕ ಎಲ್ಲ ಆತ್ಮೀಯರಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ವೇದಿಕೆ ಯ ಶಿಕ್ಷಕ ಮುಖಂಡರು ಕೋರಿದ್ದಾರೆ
ನನ್ನ ವರ್ಗಾವಣೆಗಾಗಿ ನಾನು ಬರುತ್ತಿದ್ದೇನೆ.ನಿಮ್ಮ ವರ್ಗಾ ವಣೆಗಾಗಿ ನೀವೂ ಬನ್ನಿ.ಸೋಮವಾರದಂದು ಬೆಳಿಗ್ಗೆ 09.30 ಕ್ಕೇ ಸರಕಾರಿ ನೌಕರರ ಭವನ ಸ್ಥಳದಲ್ಲಿ ಸೇರುವ ಹಾಗೆ ತಮ್ಮ ಪ್ರಯಾಣದ ಯೋಜನೆಯನ್ನು ರೂಪಿಸಿಕೊ ಳ್ಳುವುದು ಹಾಗೂ ಬರುವಾಗ ನಮ್ಮ ಆತ್ಮೀಯ ವರ್ಗಾ ವಣೆ ವಂಚಿತ ಶಿಕ್ಷಕರನ್ನು ಕರೆತರುವುದು.ಇದೊಂದು ಮಾಡು ಇಲ್ಲವೇ ಮಡಿ ಹೋರಾಟವಾಗಿದೆ
ದಯಮಾಡಿ ಎಲ್ಲರೂ ಭಾಗವಹಿಸಿ ಈ ಒಂದು ಹೋರಾ ಟಕ್ಕೆ ಶಕ್ತಿ ತುಂಬಿ ನಮ್ಮ ವರ್ಗಾವಣೆಯನ್ನು ನಾವು ಪಡೆದೇ ತೀರೋಣ ಎಂದು ವೇದಿಕೆಯ ಶಿಕ್ಷಕ ಬಂಧುಗಳು ವಿನಂತಿ ಮಾಡಿದ್ದಾರೆ