ಹುಬ್ಬಳ್ಳಿ ಧಾರವಾಡ –
ಒಂದನೇಯ ಅಲೆಗಿಂತ ಎರಡನೇಯ ಅಲೆಯಲ್ಲಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸಾಲು ಸಾಲಾಗಿ ರಾಜ್ಯದಲ್ಲಿ ಸಾಕಷ್ಟ ಪ್ರಮಾಣದಲ್ಲಿ ಶಿಕ್ಷಕರು ಮೃತರಾಗಿದ್ದು ನಮಗೆ ನಿಮಗೆ ಗೊತ್ತಿರುವ ವಿಚಾರ.ದೊಡ್ಡ ಆತಂಕದ ನಡುವೆಯೂ ಮತ್ತೊಂದು ಚುನಾವಣೆಗೆ ಧಾರವಾಡ ಜಿಲ್ಲೆಯಲ್ಲಿ ಶಿಕ್ಷಕರನ್ನು ಪಾಲಿಕೆಯ ಚುನಾವಣೆಗೆ ನೇಮಕ ಮಾಡಿದ್ದಾರೆ.ಹೌದು ಸೆಪ್ಟಂಬರ್ 3 ರಂದು ನಡೆಯ ಲಿರುವ ಮಹಾನಗರ ಪಾಲಿಕೆಯ ಚುನಾವಣೆಗೆ ಜಿಲ್ಲೆಯಲ್ಲಿ ಒಟ್ಟು 561 ಶಿಕ್ಷಕರನ್ನು ನೇಮಕ ಮಾಡಿದ್ದಾರೆ.
ಸಾಕಷ್ಟ ಪ್ರಮಾಣದಲ್ಲಿ ಎರಡನೇಯ ಅಲೆಯಲ್ಲಿ ಶಿಕ್ಷಕರು ಅದರಲ್ಲೂ ಉಪ ಚುನಾವಣೆ ಕರ್ತವ್ಯ ಮಾಡಿದ ಮೃತರಾಗಿದ್ದಾರೆ.ಇದರ ನಡುವೆ ಈಗ ಮತ್ತೊಂದು ಪಾಲಿಕೆಯ ಚುನಾವಣೆಯ ಕರ್ತವ್ಯಕ್ಕೆ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ.ಈ ಕುರಿತಂತೆ ಇದನ್ನು ವಿರೋಧ ಮಾಡಬೇಕಾದ ಶಿಕ್ಷಕ ಸಂಘಟನೆಯ ನಾಯಕರು ಮೌನವಾಗಿದ್ದಾರೆ.ಇನ್ನೂ ಪ್ರಮುಖ ವಾಗಿ ಇತ್ತ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಶಿಕ್ಷಕರನ್ನು ಚುನಾವಣೆಯ ಕರ್ತವ್ಯಕ್ಕೆ ನಿಯೋಜನೆ ಮಾಡದಂತೆ ಒತ್ತಾಯಿಸಿ ಧಾರವಾಡ ಘಟಕ ದಿಂದ ತಹಶೀಲ್ದಾರ ಅವರಿಗೆ ಮನವಿಯನ್ನು ನೀಡಿದ್ದಾರೆ ಆದರೂ ಕೂಡಾ ಯಾರ ಮಾತನ್ನು ಯಾರ ಮನವಿಗೆ ಸ್ಪಂದಿಸದೇ ನೇಮಕ ಮಾಡಲಾಗಿದೆ.
ಇನ್ನೂ ಕರ್ನಾಟಕ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರ ತವರೂ ರಾಗಿರುವ ಧಾರವಾಡ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣ ದಲ್ಲಿ ಮತ್ತೊಂದು ಚುನಾವಣೆಗೆ ಶಿಕ್ಷಕರನ್ನು ನಿಯೋ ಜನೆ ಮಾಡಿದ್ದರು ಕೂಡಾ ಅವರು ಮೌನವಾಗಿ ರೊದು ದುರಂತವೇ ಸರಿ.ಒಟ್ಟಾರೆ ಏನೇ ಆಗಲಿ ಚುನಾವಣೆಯ ಕರ್ತವ್ಯಕ್ಕೆ ನಿಯೋಜನೆ ಮಾಡಿರುವ ಶಿಕ್ಷಕರಿಗೆ ಸೇರಿದಂತೆ ಎಲ್ಲರಿಗೂ ಸರಿಯಾದ ವ್ಯವಸ್ಥೆ ಸೌಲಭ್ಯಗಳನ್ನಾದರೂ ನೀಡಲಿ ಅಂದಾಗ ಯಾವು ದೇ ಆತಂಕವಿಲ್ಲದೇ ನೆಮ್ಮದಿಯಿಂದ ಚುನಾವಣೆ ಯನ್ನು ಮಾಡಬಹುದು ಇಲ್ಲವಾದರೆ ಮತ್ತೊಂದು ಆತಂಕವನ್ನು ಹುಟ್ಟು ಉಂಟಾಗುತ್ತದೆ.