ಧಾರವಾಡ –
ಧಾರವಾಡದ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕ ಘಟಕ ಧಾರವಾಡ ಗೆ ಧಾರವಾಡ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕ ಶಿಕ್ಷಕಿಯರ ಪತ್ತು ಬೆಳೆಸುವ ಸಹಕಾರಿ ಸಂಘದಲ್ಲಿ ನಿವೃತ್ತಿಗೊಂಡ ಮತ್ತು ವರ್ಗಾವಣೆ ಹಾಗೆ ಮುಂತಾದ ಕಾರಣಗಳಿಂದ ಖಾಲಿ ಇರುವ 3 ನಿರ್ದೇಶಕರ ಹುದ್ದೆಗಳಿಗೆ ಆಡಳಿತ ಮಂಡಳಿ ನಿಯಮಾನುಸಾರ ನೇಮಕಾತಿ ಮಾಡಲಾಯಿತು

ಎಚ್ ಎಫ್ ಜಿಲ್ಲೆ ನವರ,ಅಯ್ಯಪ್ಪ ಮೊಕಾಶಿ,ರಾಜು ಮಾಳವಾಡ ಇವರನ್ನು ನೂತನ ನಿರ್ದೇಶಕರಾಗಿ ನಾಮ ನಿರ್ದೇಶನ ಮಾಡಲಾಯಿತು.ನೂತನ ನಿರ್ದೇಶಕರಿಗೆ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧಾರವಾಡ ತಾಲೂಕ ಘಟಕದ ವತಿಯಿಂದ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಲಾಯಿತು