ಕ್ಯಾರಕೊಪ್ಪ –
ಕೋರೋನಾ ವೈರಸ್ ನಿಯಂತ್ರಣ ಮಾಡಲು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದಕ್ಕಾಗಿ ಹಾಗೆ ಯಾವುದೇ ರೀತಿಯಲ್ಲೂ ವೈರಸ್ ಹರಡದಂತೆ ಧಾರವಾಡ ದ ಕ್ಯಾರಕೊಪ್ಪ ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಇಂದು ಸ್ಯಾನಿಟೈಜೇಶನ್ ಮಾಡಿಸಲಾಯಿತು

ರವಿವಾರ ರಜೆ ಇದ್ದರೂ ಕೂಡಾ ಶಾಲೆಯ ಪ್ರಧಾನ ಗುರುಗಳಾದ ಗುರು ತಿಗಡಿ ಮತ್ತು ಶಾಲೆಯ ಸಿಬ್ಬಂದಿ ಗಳು ಮತ್ತು SDMC ಟೀಮ್ ಹಾಗೆ ಗ್ರಾಮ ಪಂಚಾಯತಿ ಸದಸ್ಯರ ನೇತೃತ್ವದಲ್ಲಿ ಶಾಲೆಯನ್ನು ಸಂಪೂರ್ಣವಾಗಿ ಸ್ಯಾನಿಟೈಜೇಶನ್ ಮಾಡಿಸಲಾಯಿತು




ಹೌದು ಕರೋನಾ ನಿಯಂತ್ರಣಕ್ಕಾಗಿ ಇಂದು ಶಾಲೆಗೆ ರಜೆ ಇದ್ದ ಕಾರಣಕ್ಕಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕ್ಯಾರಕೊಪ್ಪ ಸ್ಯಾನಿಟೈಜೇಶನ್ ಮಾಡಲಾಯಿತು.ಈ ಒಂದು ಸಮಯದಲ್ಲಿ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ರಾದ ಶಿವಾನಂದ ಬೇಲೂರ,ವಿನೋದ ಬೆಳ್ಳಿಗಟ್ಟಿ, ಮೌಲಾಸಾಬ್ ಹೊರವಣಿ,ಶಿವರಾಂ ಸರವಂದ,ಮಾರುತಿ ಆರೇರ,ಅನ್ನಪೂರ್ಣ ಹರಿಜನ ಸೇರಿದಂತೆ ಹಲವರು ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.