ಧಾರವಾಡ –
ಕಳೆದ ಮೂರು ದಿನಗಳಿಂದ ಧಾರವಾಡದಲ್ಲಿ ಬೀಡು ಬಿಟ್ಟಿರುವ ಗಜರಾಜನ ಕಾರ್ಯಾಚರಣೆ ಇನ್ನೂ ಮುಗಿಯುತ್ತಿಲ್ಲ. ನಗರದ ಕರ್ನಾಟಕ ವಿಶ್ವವಿದ್ಯಾಲ ಯದಿಂದ ತಡಸಿನಕೊಪ್ಪಕ್ಕೆ ಅಲ್ಲಿಂದ ಸಧ್ಯ ಯರಿ ಕೊಪ್ಪದಲ್ಲಿ ಆನೆಯೊಂದು ಇದೆ.

ಅಲ್ಲಿಂದ ಇಲ್ಲಿಯವರೆಗೆ ಸಧ್ಯ ಯರಿಕೊಪ್ಪದಲ್ಲಿ ಬಂದು ಠಿಕಾಣೆಯನ್ನು ಹೂಡಿದೆ.ಈವರೆಗೆ ಅಷ್ಟೊಂ ದು ಯಾವುದೇ ರೀತಿಯಲ್ಲೂ ಹಾನಿಯನ್ನು ಮಾಡ ದ ಆನೆ ತಾನಾಯಿತು ತನ್ನ ಓಡಾಟವಾಯಿತೆಂದು ಕೊಂಡು ಆಕಡೆಯಿಂದ ಈಕಡೆ ಅನ್ನುತ್ತಾ ತಿರುಗಾ ಡುತ್ತಿದೆ.

ಕಳೆದ ಮೂರು ದಿನಗಳಿಂದ ಕಾಲಿಗೆ ಚಕ್ರವನ್ನು ಕಟ್ಟಿ ಕೊಂಡವರಂತೆ ಅರಣ್ಯಾಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಒಂದು ವೇಳೆ ನಗರಕ್ಕೆ ಪ್ರವೇಶ ಮಾಡಿದರೆ ಏನಾದರೂ ಅನಾಹುತಗಳಾಗ ಬಾರದು ಎಂಬ ಒಂದು ಕಾರಣಕ್ಕಾಗಿ ಅರಣ್ಯ ಇಲಾ ಖೆಯ ಅಧಿಕಾರಿಗಳು ಮುಂಜಾಗೃತೆ ದೃಷ್ಟಿಯಿಂದ ಶಿವಮೊಗ್ಗದಿಂದ ಈ ಒಂದು ಆನೆಯನ್ನು ಸೆರೆ ಹಿಡಿ ಯಲು ಮತ್ತೊಂದು ಆನೆಯನ್ನು ಕರೆತರಲಾಗಿದೆ.

ಈಗಾಗಲೇ ಮೂರು ಸ್ಥಳಗಳನ್ನು ಬದಲಾವಣೆ ಮಾಡಿರುವ ಆನೆ ಸಧ್ಯ ಯರಿಕೊಪ್ಪದಲ್ಲಿ ಇದೆ. ಸ್ಥಳದಲ್ಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಮ ತ್ತು ಸಿಬ್ಬಂದಿ ಇನ್ನೂ ಇವರೊಂದಿಗೆ ಪೊಲೀಸ್ ಅಧಿ ಕಾರಿಗಳು ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದಾರೆ. ಈಗಾಗಲೇ ಶಿವವೊಗ್ಗದಿಂದ ಲಾರಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತೊಂದು ಆನೆಯ ನ್ನು ತಗೆದುಕೊಂಡು ಬಂದಿದ್ದು

ಕಾರ್ಯಾಚರಣೆಗೆ ಸಿದ್ದವಾಗಿದ್ದು ಯಾವುದೇ ಕ್ಷಣದಲ್ಲಾದರೂ ಆನೆ ತನ್ನ ಪಾಡಿಗೆ ತಾನು ಅರಣ್ಯಕ್ಕೆ ಹೋಯಿತೆಂದರೆ ಪರವಾಗಿಲ್ಲ ಇಲ್ಲವಾದರೆ ಅದನ್ನು ಹಿಡಿದು ಕಾಡಿಗೆ ಬಿಡುವ ಯೋಚನೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಡಿಕೊಂಡಿದ್ದು ಏನಾ ಗುತ್ತದೆ ಎಂಬುದನ್ನು ಕಾದು ನೋಡೂಬೇಕಿದೆ