ಹುಬ್ಬಳ್ಳಿ –
ರೈತ ಭವನ ವಿಚಾರವಾಗಿ ಪಾಲಿಕೆಯ ಮಾಜಿ ಸದಸ್ಯ ಮತ್ತು ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದೆ. ಹೌದು ಜನಪ್ರತಿನಿಧಿಗಳಿಬ್ಬರ ನಡುವೆ ಇಂಥಹದೊಂದು ಜಗಳವೊಂದು ಹುಬ್ಬಳ್ಳಿಯಲ್ಲಿ ನಡೆದಿದೆ.ವೀರಾಪುರ ಓಣಿಯ ರೈತ ಭವನ ಉದ್ಘಾಟಣೆ ಸಮಾರಂಭದಲ್ಲಿ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಮತ್ತು ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ್ ನಡುವೆ ನಡೆದಿದೆ.
ಮಹಿಳಾ ರೈತ ಭವನ ವಿಚಾರವಾಗಿ ವಾಗ್ವಾದ ನಡೆದಿದೆ. ನಗರದ ವೀರಾಪುರ ಓಣಿಯ ರೈತ ಭವನ ಉದ್ಘಾಟಣೆ ಸಮಾರಂಭದಲ್ಲಿ ರೈತ ಭವನ ಕಟ್ಟಡದಲ್ಲಿ ಮಹಿಳಾ ಭವನ ನಿರ್ಮಾಣ ವಿಚಾರವಾಗಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ್ ಹಾಗೂ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ನಡುವೆ ಮಾತಿಗೆ ಮಾತು ಬೆಳೆದು ನಂತರ ಜೋರಾಗಿ ಮಾತನಾಡಿ ಇಬ್ಬರು ನಾಯಕರು ಜಗಳ ಮಾಡುವ ಹಂತಕ್ಕೇ ಹೊಗಿದ್ದಾರೆ.
ಕಾರ್ಯಕ್ರಮಕ್ಕೆ ಬಂದಿದ್ದ ವೇದಿಕೆಯ ಮೇಲಿದ್ದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಸಮ್ಮುಖದಲ್ಲಿ ಇಬ್ಬರು ನಾಯಕರು ಜಗಳ ಮಾಡಿದ್ದಾರೆ.ಘಟನೆಗೆ ಪ್ರಮುಖ ಕಾರಣ ಕಾರ್ಯಕ್ರಮವನ್ನು ಉದ್ದೇಶಿಸಿ ಶಾಸಕ ಪ್ರಸಾದ ಅಬ್ಬಯ್ಯ ಮಾತು ಆರಂಭ ಮಾಡಿದರು. ಈ ಒಂದು ಸಮುದಾಯ ಭವನ ರೈತ ಮಹಿಳೆಯಿರಿಗೆ ಮೀಸಲಾಗಿದ್ದು. ಯಾರೇ ಬಂದರೂ ಇದನ್ನು ನಾವು ಬಿಟ್ಟುಕೊಡೊದಿಲ್ಲ ಎಂದು ಭಾಷಣದಲ್ಲಿ ಹೇಳಿದರು.
ಹೀಗೆ ಶಾಸಕರು ಹೇಳುತ್ತಿದ್ದಂತೆ ಇತ್ತ ವೇದಿಕೆಯ ಮೇಲಿದ್ದ ಪಾಲಿಕೆಯ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಗರಂ ಆದರು. ಈ ಹಿಂದೆ ನಾವು ನೀವು ಮಾತನಾಡಿದಂತೆ ಮಹಿಳೆಯರಿಗಾಗಿ ಒಂದು ಭವನವನ್ನು ಕೊಡುತ್ತೇನೆ ಎಂದು ಹೇಳಿದ್ದಿರಿ. ಈಗ ರೈತ ಮಹಿಳೆಯರಿಗೆ ಅಷ್ಟೇ ಯಾಕೇ ಅಂತಾ ಪ್ರಶ್ನಿಸಿದ್ರು. ಹೀಗೆ ಕೇಳುತ್ತಿದ್ದಂತೆ ಇತ್ತ ಶಾಸಕ ಪ್ರಸಾದ್ ಅಬ್ಬಯ್ಯ ಗರಂ ಆದ್ರೂ. ಮಾತನಾಡುವಾಗ ಆರಂಭಗೊಂಡ ಇಬ್ಬರು ನಾಯಕರ ಜಗಳ ಕೆಲವೊತ್ತು ಮುಗಿಯಲಿಲ್ಲ. ಕೊನೆಗೆ ವೇದಿಕೆ ಬಿಟ್ಟು ಹೋರ ಹೋಗುವಂತೆ ಹೇಳಿದ್ದಕ್ಕೇ ಮತ್ತಷ್ಟು ಕೆಂಡಾ ಮಂಡಲವಾದ ಮಾಜಿ ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ ಶಾಸಕರ ವಿರುದ್ಧ ಗರಂ ಆದರು ಇದನ್ನು ನೋಡಿದ ಇಬ್ಬರು ಸಚಿವರು ಶಾಸಕರನ್ನು ಸಮಾಧಾನ ಮಾಡಿದ್ರು. ಇತ್ತ ಜಿಲ್ಲಾಧಿಕಾರಿಯವರು ಪಾಲಿಕೆಯ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣನವರನ್ನು ಸಮಾಧಾನ ಮಾಡಿ ಇಬ್ಬರ ನಡುವಿನ ಜಗಳವನ್ನು ನಾಯಕರು ಮದ್ಯ ಪ್ರವೇಶಿಸಿ ಜಗಳವನ್ನು ತಿಳಿಗೊಳಿಸಿದರು.