ಧಾರವಾಡ –
ಮಟಕಾ ಚೀಟಿ ಬರೆಯುತ್ತಿದ್ದ ಆರೋಪಿಯನ್ನು ಧಾರವಾಡದಲ್ಲಿ ಸಿಸಿಬಿ ಪೊಲೀಸರು ಬಂಧನ ಮಾಡಿದ್ದಾರೆ. ಇನ್ಸ್ಪೆಕ್ಟರ್ ಭರತ್ ರೆಡ್ಡಿ ಮತ್ತು ಅಲ್ಲಾಫ್ ಮುಲ್ಲಾ ಇವರ ನೇತ್ರತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒರ್ವ ಆರೋಪಿಯನ್ನು ಬಂಧನ ಮಾಡಲಾಗಿದೆ. ಧಾರವಾಡದ ಎಪಿಎಮ್ ಸಿ ಬಳಿ ಬರೆಯುತ್ತಿದ್ದ ಮಾಹಿತಿಯನ್ನು ಪಡೆದು ಕೊಂಡ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮಾಡಿ ಒರ್ವ ಆರೋಪಿಯನ್ನು ಬಂಧನ ಮಾಡಲಾ ಗಿದೆ. ರಫೀಕ್ ಶೇಕ್ ಎಂಬುವನೇ ಬಂಧಿತ ಆರೋಪಿ ಯಾಗಿದ್ದು ನಗರದ ಹೊಯ್ಸಳ ನಗರದ ನಿವಾಸಿ ಯಾಗಿದ್ದಾರೆ. ಇನ್ನೂ ಸದ್ಯ ಆರೋಪಿಯನ್ನು ಬಂಧ ನ ಮಾಡಿರುವ ಸಿಸಿಬಿ ಪೊಲೀಸರು ಮುಂದಿನ ತನಿಖೆಗಾಗಿ ಉಪನಗರ ಪೊಲೀಸರಿಗೆ ಒಪ್ಪಿಸಿದ್ದಾ ರೆ. ಈ ಮಧ್ಯೆ ಈ ಒಂದು ಕಾರ್ಯಾಚರಣೆ ಯಲ್ಲಿ ಅಧಿಕಾರಿಗಳೊಂದಿಗೆ ಎಎಸ್ಐ ಶಿವಾಜಿ ಸಾಳುಂಕೆ, ದಯಾನಂದ ಗುಂಡಗೈ,ಎಸ್ಪಿ ಲಮಾಣಿ, ಬೊಗೂರು, ನಾರಾಯಣ ಜಾಧವ,ಶಿವಾನಂದ ಕೆಂಪೊಡೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.