ಹುಬ್ಬಳಿ –
ಐಪಿಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಓರ್ವನನ್ನು ಹುಬ್ಬಳ್ಳಿಯ ಶಹರ ಠಾಣೆ ಪೊಲೀಸರು ಬಂಧಿಸಿ ದ್ದಾರೆ.ಗಣೇಶ ತಂದೆ ಅಣ್ಣಪ್ಪ ನವಲೂರ ಬಂಧಿತ ಆರೋಪಿಯಾಗಿದ್ದಾನೆ.ಹುಬ್ಬಳ್ಳಿಯ ಮೇದಾರ ಓಣಿ ಸರ್ಕಲ್ ನಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಎಲಿವನ್ ಪಂಜಾಬ ಟೀಮ್ ಗಳ ಪಂದ್ಯಾವಳಿ ಮೇಲೆ ಕ್ರಿಕೇಟ್ ಬೆಟ್ಟಿಂಗ್ ಆಡುತ್ತಿದ್ದ ವೇಳೆ ಆರೋ ಪಿಯನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನಿಂದ ಒಂದು ಮೊಬೈಲ್ ಹಾಗೂ 12,500/- ರೂ ನಗದು ಹಣ ಮತ್ತು ಒಂದು ಪೆನ್ನು ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಸದರಿ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಿ ದ್ದಾರೆ

ಈ ಪ್ರಕರಣವನ್ನು ಭೇಧಿಸಿದ ಆನಂದ ಒನಕುದ್ರೆ ಪೊಲೀಸ ಇನ್ಸ್ಪೆಕ್ಟರ್ ಶಹರ ಪಿ.ಎಸ್.ಹುಬ್ಬಳ್ಳಿ ಹಾಗೂ ಅವರ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ