ಹುಬ್ಬಳ್ಳಿ ರೇಲ್ವೆ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿ ಬಂಗಾರ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧನ ಮಾಡಿದ್ದಾರೆ. 2019 ಮತ್ತು 2020ನೇ ಸಾಲಿನಲ್ಲಿ ವರದಿಯಾದ ರೈಲು ಪ್ರಯಾಣಿಕರ ಸ್ವತ್ತು ಕಳ್ಳತನ
ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿತನಾದ ಸನ್ನಿ ತಂದೆ ಸನ್ಮಾನ ಹವಿಜಾ, ಓಸನ್ನ ಚರ್ಚ ಹತ್ತಿರ ಮಂಟೂರು ರೋಡ್ ಹುಬ್ಬಳ್ಳಿ ಇತನನ್ನು ಬಂಧನ ಮಾಡಲಾಗಿದೆ.

ಶ್ರೀಮತಿ ಡಿ. ಆರ್. ಸಿರಿಗೌರಿ, ಐ.ಪಿ.ಎಸ್, ಎಸ್.ಪಿ
ರೈಲ್ವೇಸ್, ಬೆಂಗಳೂರು, ಶ್ರೀಮತಿ ಪುಷ್ಪಲತಾ ಡಿ.ಎಸ್.ಪಿ ರೇಲ್ವೆ ಹುಬ್ಬಳ್ಳಿ ಮಾರ್ಗದರ್ಶನದಲ್ಲಿ ಜೆ.ಎಮ್. ಕಾಲಿಮಿರ್ಚಿ, ಸಿ.ಪಿ.ಐ ರೈಲ್ವೇ ವೃತ್ತ ಹುಬ್ಬಳ್ಳಿ ರವರು ದಸ್ತಗಿರಿ ಮಾಡಿ ಆರೋಪಿಯಿಂದ 2019 ಮತ್ತು 2020ನೇ ಸಾಲಿನ 7 ಪ್ರಕರಣಗಳಲ್ಲಿ ಅಂದಾಜು 10,00,000/- ಮೌಲ್ಯದ ಬಂಗಾರದ ಆಭರಣಗಳನ್ನು ಹಾಗೂ ವಿವಿಧ ಕಂಪನಿಗಳ ಮೋಬೈಲ್‍ಗಳನ್ನು ವಶಪಡಿಸಿಕೊಂಡು 7 ಪ್ರಕರಣಗಳನ್ನು ಪತ್ತೆ ಮಾಡಲಾಗಿರುತ್ತದೆ.

ಈ ಒಂದು ಕಾರ್ಯಾಚರಣೆಯಲ್ಲಿ ಸತ್ಯಪ್ಪ ಎಂ ಪಿ.ಎಸ್.ಐ ಹುಬ್ಬಳ್ಳಿ ರೈಲ್ವೆ ಪಿ.ಎಸ್ ರವರು ಹಾಗೂ ಸಿಬ್ಬಂದಿಯವರಾದ ನಿಂಗಪ್ಪ ಹಾವನ್ನಗೋಳ, ಬಸವರಾಜ ಯಕ್ಕಣ್ಣವರ, ರಮೇಶ ಲಮಾಣಿ, ಸುಭಾಸ ದಳವಾಯಿ, ಯೂಸೂಪ್ ನದಾಫ್, ರವಿ ವಾಲ್ಮೀಕಿ, ಪ್ರವೀಣ ಪಾಟೀಲ್ ಸೇರಿದಂತೆ ಹಲವರು ಈ ಒಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.