ಹುಬ್ಬಳ್ಳಿ –
ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವನ್ನು ಹುಬ್ಬಳ್ಳಿಯ ಆರ್ಥಿಕ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸರು ಬೇಧಿಸಿದ್ದಾರೆ. ಖಚಿತವಾದ ಮಾಹಿತಿಯನ್ನು ಪಡೆದುಕೊಂಡ ಪೊಲೀಸರು ಕಾರ್ಯಾಚರಣೆ ಮಾಡಿ ಬರೊಬ್ಬರಿ 8 ಕೆಜಿ 495 ಗ್ರಾಂ ಗಾಂಜಾವನ್ನು ವಶಕ್ಕೆ ತಗೆದು ಕೊಂಡು ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಒಟ್ಟು 85.000/-ಬೆಲೆಯ 8ಕಿಲೋ 495 ಗ್ರಾಂ ತೂಕದ ಗಾಂಜಾ ಮತ್ತು ಐದು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ಸಲೀಮಿಯಾ ಮೌಜನ್,ರಮೇಶ್ ಕೊರವಾ, ಸಿದ್ದಾರ್ಥ ಹಬೀಬ,ಲಿಂಗೇಶಗೌಡ ಪಾಟೀಲ, ಮಹೇಶ ಪಾಟೀಲ, ಬಂಧಿತ ಆರೋಪಿಗಳಾಗಿದ್ದಾರೆ.
ಇವರೆಲ್ಲರೂ ಹುಬ್ಬಳ್ಳಿ ಮತ್ತು ಬೀದರ್ ದವರಾಗಿದ್ದಾರೆ. ಆರೋಪಿತರೆಲ್ಲರೂ ಹುಬ್ಬಳ್ಳಿ ಆನಂದ ನಗರ, ಟಿಪ್ಪುನಗರ, ಮಾವನವಿರ ರೋಡ, ಇಂಡಿಪೆಂಡ, ಹೊಸೂರ ಸಕಲ ವಿಧಾನಗರ, ಗಿರಣಿಚಾಳ, ಕುಸುಗಲ್ಲ ರೋಡ ಗೋಪನಕೊಪ್ಪ, ಇನ್ನು ಮುಂತಾದ ಸ್ಥಳಗಳಲ್ಲಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದು ಕೊಂಡ ಪೊಲೀಸರು ಆರೋಪಿಗಳನ್ನು ಮಾರಾಟ ಮಾಡುವಾಗ ರೇಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶ ನದಲ್ಲಿ ನಡೆದ ಕಾರ್ಯಾಚರಣೆಯನ್ನು ಇನಸ್ಪೇಕ್ಟರ್ ಎಮ್ ಎಸ್ ಹೂಗಾರ, ನೇತ್ರತ್ವದಲ್ಲಿ ಪಿಎಸ್ಐ ಸದಾಶಿವ ಕಾನಟ್ಟಿ ಮತ್ತು ಟೀಮ್ ನವರು ದಾಳಿ ಮಾಡಿದ್ದಾರೆ. ಇನ್ನೂ ಈ ಒಂದು ಕಾರ್ಯಾಚರಣೆ ಯಲ್ಲಿ ಸಿಬ್ಬಂದಿಗಳಾದ ಎಸ್ ಎಮ್ ಕುರಹಟ್ಟಿ,ಸಿ ಎಮ್ ಕಂಬಾಳಿಮಠ, ಎಮ್ ಎಚ್ ಹಾಲಾವರ, ಎಮ್ ಎಮ್ ತಹಶೀಲ್ದಾರ,ಪಿ ಕೆ ಬಿಕ್ಕನಗೌಡರ, ಗಿರೀಶ ಬಡಿಗೇರ,ರವಿ ಕೊಳ್ಳಿ, ಫಕೀರೇಶ ಸುಣಗಾರ,ಜಯಶ್ರೀ ಚಿಲ್ಲೂರ ಸೇರಿದಂತೆ ಹಲವು ಸಿಬ್ಬಂದಿಗಳು ಈ ಒಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.