ಧಾರವಾಡ
ಅಕ್ರಮವಾಗಿ ಸಾಗವಾನಿ ಮರಗಳನ್ನು ಕಡಿದು ಅವುಗಳನ್ನು ಪೀಠೋಪಕರಣನ್ನು ಮಾಡಿ ಮಾರಾಟ ಮಾಡುತ್ತಿದ್ದ ಜಾಲವನ್ನು ಧಾರವಾಡದಲ್ಲಿ ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಧಾರವಾಡ ತಾಲೂಕಿನ ಹೊನ್ನಾಪುರ ಅರಣ್ಯ ಪ್ರದೇಶದ ಸಾಗುವಾನಿ ಮರಗಳನ್ನು ಕಡಿದು ಪೀಠೋಪಕರಣವನ್ನಾಗಿಸಿ ಮಾರಾಟ ಮಾಡುತ್ತಿದ್ದರು ಮರಗಳ್ಳರು.

ನಿಂಗಪ್ಪ ಗಸ್ತಿ ಮತ್ತು ಪುಂಡಲೀಕ ಗಸ್ತಿ ಬಂಧಿತನಾಗಿದ್ದಾರೆ.ಆರೋಪಿಗಳಿಂದ 1 ಲಕ್ಷ ಮೌಲ್ಯದ ಪೀಠೋಪಕರಣ ಸೇರಿ ಒಂದು ವಾಹನವನ್ನು ಅರಣ್ಯ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.ಮುಖ್ಯ ಅರಣ್ಯಾಧಿಕಾರಿ ಯಶಪಾಲ ಕ್ಷೀರಸಾಗರ ಮಾರ್ಗದರ್ಶನದಲ್ಲಿ ನಡೆದ ಈ ಒಂದು ಕಾರ್ಯಾಚರಣೆಯಲ್ಲಿ ಆರ್ ಎಸ್ ಉಪ್ಪಾರ,ಎಮ್ ಎಮ್ ತಲ್ಲೂರ,ಪಿ ಡಿ ಮಣಕೂರ, ಎಮ್ ಡಿ ಲಮಾಣಿ,ಸಿ ಎಸ್ ರೊಟ್ಟಿ,ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
