ಹುಬ್ಬಳ್ಳಿ –
ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಹಾಗೂ ವಿವಿಧ ಕಡೆಗಳಲ್ಲಿ ಮೊಬೈಲ್ ಪೋನ್ ಕಳ್ಳತನ ಮಾಡುತ್ತಿದ್ದ ನಾಲ್ಕು ಜನ ಆರೋಪಿತರನ್ನು ಹುಬ್ಬಳ್ಳಿಯ ಉಪನಗರ ಪೊಲೀಸರು ಬಂಧನ ಮಾಡಿದ್ದಾರೆ.
ಬಂಧಿತರಿಂದ 1,42,100/- ರೂಪಾಯಿ ಕಿಮ್ಮತ್ತಿನ ವಿವಿಧ ಕಂಪನಿಗಳ ಒಟ್ಟು 20 ಮೊಬೈಲ್ ಪೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿರುವ ಮೇಲೆ ನಿಗಾವಹಿಸಿ ಕಾನೂನು ಕ್ರಮ ಜರುಗಿಸಲು ಕೆ.ರಾಮ್‍ರಾಜನ್, ಉಪ ಪೊಲೀಸ್ ಆಯುಕ್ತರು, (ಕಾ ವ ಸು) ಹುಬ್ಬಳ್ಳಿ-ಧಾರವಾಡ ಮತ್ತು ಆರ್ ಬಿ ಬಸರಗಿ, ಉಪ ಪೊಲೀಸ್ ಆಯುಕ್ತರು, (ಅ ವ ಸಂ) ಹುಬ್ಬಳ್ಳಿ-ಧಾರವಾಡ ರವರ ಮಾರ್ಗದರ್ಶನದಲ್ಲಿ ರವಿಚಂದ್ರ ಡಿ. ಬಡಪಕ್ಕೀರಪ್ಪನವರ, ಪೊಲೀಸ್ ಇನ್ಸಪೆಕ್ಟರ್, ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ ಇವರ ನೇತ್ರತ್ವದ ತಂಡವು ನಾಲ್ಕು ಜನ ಆರೋಪಿತರನ್ನು ಬಂಧನ ಮಾಡಿದ್ದಾರೆ.
ಮಾರುತಿ ತಂದೆ ಬೀಮಪ್ಪ ಗೊಲ್ಲರ, ವಯಾ 31 ವರ್ಷ, ಸಾ ಹಳೇ ಹುಬ್ಬಳ್ಳಿ ,ವಿನಾಯಕ ತಂದೆ ನಾಗಪ್ಪ ಕಬ್ಬಿನ, ವಯಾ 26 ವರ್ಷ, ಹುಬ್ಬಳ್ಳಿ , ರಾಹುಲ್ ತಂದೆ ಇಮಾಮ್ ಶಿವಳ್ಳಿ, ವಯಾ 22 ವರ್ಷ, ಹಳೇ ಹುಬ್ಬಳ್ಳಿ.ಜಾಕೀರ ತಂದೆ ಅನ್ವರ ತಾಳಿಕೋಟಿ, ವಯಾ 20 ವರ್ಷ, ಹಳೇ ಹುಬ್ಬಳ್ಳಿ, ಬಂಧಿತ ಆರೋಪಿತರಾಗಿದ್ದಾರೆ.
ಕಳ್ಳತನದ ಪ್ರಕರಣ ಒಂದಕ್ಕೆ ಸಂಭಂದಿಸಿದಂತೆ ವಿಚಾರಣೆ ಮಾಡಿದಾಗ ಪ್ರಕರಣ ಬಯಲಿಗೆ ಬಂದಿದೆ. ಓಪೋ ಕಂಪನಿಯ ಮೊಬೈಲ್ ಪೋನ್ ಗಳನ್ನು ಹಾಗೂ ಬಸ್ಸುಗಳಲ್ಲಿ, ರಾತ್ರಿ ವೇಳೆ ಮಲಗಿಕೊಂಡ ವ್ಯಕ್ತಿಗಳ ಕೀಸೆಗಳಿಂದ, ಬಾರ್ & ರೆಸ್ಟೂರೆಂಟ್‍ಗಳಲ್ಲಿ, ಅಂಗಡಿಗಳಲ್ಲಿ ಕಳ್ಳತನ ಮಾಡಿದ ಒಟ್ಟು 1,42,100-00 ರೂಪಾಯಿ ಕಿಮ್ಮತ್ತಿನ ಇಪ್ಪತ್ತು ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಆರೋಪಿತರು ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದ ಒಳಗೆ ಕಾಯ್ದಿರಿಸಿದ ಪ್ರಯಾಣಿಕರ ವಿಶ್ರಾಂತಿ ಕೊಠಡಿ ಪಕ್ಕದಲ್ಲಿ ಮಲಗಿಕೊಂಡ ವ್ಯಕ್ತಿಯ ಪ್ಯಾಂಟಿನ ಕೀಸೆಯಲ್ಲಿ ಕಳ್ಳತನ ಮಾಡಿದ ಕೃತ್ಯಕ್ಕೆ ಸಂಭಂದಿಸಿದ ಪ್ರಕರಣ ಪತ್ತೆಯಾಗಿರುತ್ತದೆ
ಈ ಮೇಲ್ಕಂಡ ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿತರನ್ನು ಬಂಧಿಸಿ, ಮೊಬೈಲ್ ಪೋನುಗಳನ್ನು ವಶಪಡಿಸಿಕೊಳ್ಳುವಲ್ಲಿ ರವಿಚಂದ್ರ ಬಡಪಕ್ಕೀರಪ್ಪನವರ, ಪೊಲೀಸ್ ಇನ್ಸಪೆಕ್ಟರ್, ಹಾಗೂ ತಂಡವು ಕರ್ತವ್ಯ ನಿರ್ವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.