ಕಲಬುರಗಿ –
ಕಲಬುರಗಿ ನಗರ ರೌಡಿ ನಿಗ್ರಹ ಪಡೆಯ ಪೊಲೀಸ್ ರು ಭರ್ಜರಿ ಕಾರ್ಯಾಚಾರಣೆ ಮಾಡಿ ಆರು ಜನ ಖತರ್ನಾಕ ದರೋಡೆಕೋರರನ್ನ ಬಂಧಿಸಿದ್ದಾರೆ.
ಕಳೆದ ರಾತ್ರಿ ಕಲಬುರಗಿ ನಗರದ ಹೊರವಲಯದಲ್ಲಿ ದರೋಡೆ ಮಾಡಲು ಹೊಂಚು ಹಾಕಿ ಕುಳಿತಿದ್ದಾರೆ ಅನ್ನೊ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಸಿಸಿಬಿ ಪೊಲೀಸ್ ರು ಆರು ಜನರನ್ನ ಬಂದಿದ್ದಾರೆ.
ಬಂಧಿತರನ್ನ ಮಿರ್ಜಾ ಬೇಗ್, ಮಿರ್ಜಾ ಸಲ್ಮಾನ್, ಮಹಮ್ಮದ್ ರಪೀಕ್,ಶೇಖ್ ವಸೀಂ, ಮಹಮ್ಮದ್ ಜುಬೇರ್, ಮಾಜೀದ್ ಎಂದುಗುರುತಿಸಲಾಗಿದೆ.ಈ ಗ್ಯಾಂಗ್ ಬಿಲ್ಡಪ್ ಕೊಡಲು ಅನೇಕರನ್ನು ಥಳಿಸಿ ವಿಡಿಯೋ ಮಾಡಿಕೊಂಡಿದ್ದರು.
https://youtu.be/8nJhVv0iUdQ
ಅಲ್ಲದೆ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟು ಜನ ಹೆದರುವಂತೆ ಬಿಲ್ಡಪ್ ಕೊಡ್ತಾ ಇದ್ರು.ತಲೆ ಕೆಳೆಗೆ ಕೈ ಕಾಲು ಮಾಡಿ ಹಿಡಿದು ಯುವಕನೋರ್ವನನ್ನು ಹಿಗ್ಗಾಮುಗ್ಗಾ ಥಳಿಸಿರೋ ವಿಡಿಯೋ ವೈರಲ್ ಆಗಿದೆ.
ವಿಡಿಯೋ ಮಾಡಿಕೊಂಡಿದ್ದ ದುಷ್ಟರು.ಇವರು ದರೋಡೆ, ಲ್ಯಾಂಡ್ ಡೀಲ್ ಕೇಸ್ ಮಾಡುತ್ತಿದ್ದ ಖತರ್ನಾಕ ಕಿಲಾಡಿಗಳು ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ರೆ ಅವರಿಗೆ ಇವುಗಳನ್ನ ತೋರಿಸಿ ಹೆದರಿಸುತಿದ್ದರು. ಬಂಧಿತ ಆರೋಪಿಗಳಿಂದ ಎರಡು ತಲವಾರ್,ಮೂರು ಲಾಂಗ್ ಜಪ್ತಿ ಮಾಡಿಕೊಳ್ಳ ಲಾಗಿದೆ.ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.