ಹುಬ್ಬಳ್ಳಿ –
ಹುಬ್ಬಳ್ಳಿಯ ಗೋಕುಲ ಠಾಣೆ ಪೊಲೀಸರು ಠಾಣಾ ವ್ಯಾಪ್ತಿಯಲ್ಲಿನ ಟಾಯರ್ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.

ಗೋಕುಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಿವಶಕ್ತಿ ಎಂಟರ್ ಪ್ರೈಜಸ್ ನಲ್ಲಿ 01.02.2021 ರಂದು ಕಳ್ಳತನ ಮಾಡಲಾಗಿತ್ತು. ಗೋಡೌನದ ಮೇಲ್ಛಾವಣಿ ಹತ್ತಿ ಬಂದು ಮೇಲ್ಯಾವಣಿಯ ಸಿಮೆಂಟ್ ಸೀಟಿಗೆ ಅಳವಡಿಸಿದ ನಟ ಬೋಲನ್ನು ಬಿಚ್ಚಿ ಪಕ್ಕಕ್ಕೆ ಸರಿಸಿ ಗೊಡೌನ ಒಳಗೆ ಪ್ರವೇಶ ಮಾಡಿ ಸಂಗ್ರಹಿಸಿಟ್ಟಿದ್ದ ಟಾಯರಗ ಗಳನ್ನು ಕಳ್ಳತನ ಮಾಡಲಾಗಿತ್ತು.

ವಿವಿಧ ಕಂಪನಿಗಳ ಮತ್ತು ವಾಹನಗಳಿಗೆ ಸಂಬಂಧಿ ಸಿದ 131 ಟಾಯರ್. 108 ಟ್ಯೂಬ್ ಮತ್ತು ಇತರೆ ವಸ್ತುಗಳನ್ನು ಕಳ್ಳತನ ಮಾಡಲಾಗಿತ್ತು. ಹೀಗೆ ಒಟ್ಟು 5,78,345 ರೂ ಕಿಮ್ಮತ್ತಿನ ವಸ್ತುಗಳ ನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಗೋಕುಲ ರೋಡ ಮೊಲೀಸ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು. ಈ ಕುರಿತು ಕಾರ್ಯಾಚರಣೆ ಮಾಡಿದ ಗೋಕುಲ ಠಾಣೆ ಪೊಲೀಸರು ಆರೋಪಿ ಗಳನ್ನು ಬಂಧನ ಮಾಡಿದ್ದಾರೆ.

ಹಳ್ಳೆಪ್ಪ ತಂದೆ ದೇವಪ್ಪ ಪೂಜಾರ ಸಾ: ಮಾರುತಿ ನಗರ ಗೋಕುಲ್ ರೋಡ ಹುಬ್ಬಳ್ಳಿ, ವಸೀಂ ಮಕ್ತುಮಸಾಬ ಸೈದಾಪೂರ ಸಾ: ಗದಗ ಬೆಟಗೇರಿ ನರಸಾಪೂರ ಬಂಧಿಸಿ 2,10,000/- ಕಿಮ್ಮತ್ತಿನ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಹಾಗೂ ಇನ್ನೂಳಿದ ಆರೋಪಿತರಿಗೆ ಪತ್ತೆ ಮಾಡುವದು ಬಾಕಿ ಇದ್ದು, ಸದರಿ ಎರಡು ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿನೋದ ಎಮ್. ಮುತ್ತೆದಾರ, ಸಹಾಯಕ ಪೊಲೀಸ ಆಯುಕ್ತರು, ಹುಬ್ಬಳ್ಳಿ ಶಹರ ಮಾರ್ಗದರ್ಶನದಲ್ಲಿ ಗೋಕುಲ ರೋಡ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ್ ರವರಾದ ಜಗದೀಶ್ ಸಿ. ಹಂಚಿನಾಳ, ರವರು ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳಾದ ಎಮ್.ಎಚ್ ಮೂಗನೂರ, ಎ.ಎಸ್.ಐ. ಬಸವರಾಜ ಬೆಳಗಾವಿ, ರಾಜು ಹೊರ್ಕದವರ, ಮಹಾದೇವ ಹೊನ್ನಪ್ಪನವರ, ವಿಜಯ ಹಕಾಟೆ, ಸುಲೇಮಾನ ಚೋಪದಾರ, ಮಹೇಶ ಬೆನ್ನೂರ ಹಾಗೂ ಶ್ರೀ ಸಂಜೀವರಡ್ಡಿ ಕಡಬುರ ಸೇರಿದಂತೆ ಹಲವರು ಈ ಒಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.