ಧಾರವಾಡ –
ಲಾಕ್ ಡೌನ್ ನಲ್ಲಿ ಬೆಚ್ಚಗೆ ಮನೆಯಲ್ಲಿ ಕುಳಿತು ಕೊಳ್ಳದೇ ಬಿಂದಾಸ್ ಆಗಿ ಹೊರಗಡೆ ಕ್ರಿಕೆಟ್ ಆಡು ತ್ತಿದ್ದ ಯುವಕರನ್ನು ಧಾರವಾಡದಲ್ಲಿ ಬಂಧನ ಮಾಡ ಲಾಗಿದೆ.ನಗರದ ಮುರುಘಾಮಠದ ಮೈದಾನದಲ್ಲಿ ಆಡುತ್ತಿದ್ದ ಮಾಹಿತಿ ತಿಳಿದ ಉಪನಗರ ಪೊಲೀಸರು ದಾಳಿ ಮಾಡಿ ಬಂಧನ ಮಾಡಿದ್ದಾರೆ
ಹೌದು ಲಾಕ್ ಡೌನ್ ಹಿನ್ನೆಲೆಯಲ್ಲಿ ಸಧ್ಯ ಯಾರೂ ಕೂಡಾ ಹೊರಗಡೆ ಬರುವಂತಿಲ್ಲ ಹೀಗಿರುವಾಗ ಬಿಂದಾಸ್ ಆಗಿ ಮೈದಾನದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಆಡುತ್ತಿದ್ದ ಯುವಕರನ್ನು ಹಿಗ್ಗಾ ಮುಗ್ಗಾ ಥಳಿಸಿದ ಪೊಲೀಸರು ಬಂಧಿಸಿದ್ದಾರೆ
ನಲವತ್ತಕ್ಕೂ ಹೆಚ್ಚು ಯುವಕರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಸಾಮಾನ್ಯವಾಗಿ ಎಲ್ಲರೂ ಕೂಡಾ ಪ್ರಜ್ಞಾವಂತ ಯುವಕರು ಹೀಗಿರುವಾಗ ಮನೆಯಲ್ಲಿ ಕುಳಿತುಕೊಳ್ಳುವ ಬದಲಿಗೆ ಹೊರಗಡೆ ಆಟವಾಡುತ್ತಿದ್ದ ಯುವಕರನ್ನು ಬಂಧಿಸಿ ಕರೆದು ಕೊಂಡು ಬಂದಿದ್ದಾರೆ
ಸಧ್ಯ ನಲವತ್ತಕ್ಕೂ ಹೆಚ್ಚು ಯುವಕರನ್ನು ಬಂಧಿಸಿ ಅವರ ದೂರನ್ನು ದಾಖಲು ಮಾಡಿದ್ದಾರೆ ಪ್ರಕರಣ ದಾಖಲಿಸಿಕೊಂಡು ನಂತರ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ ಪೊಲೀಸರು