ಕೋಲ್ಕತಾ –
38 ವರ್ಷದ ಶಿಕ್ಷಕಿಯನ್ನು 66 ವರ್ಷದ ಮಾಜಿ ಕ್ರಿಕೆಟಿಗ ಅರುಣ್ ಲಾಲ್ ಮದುವೆ ಯಾಗಿ ಈಗ ಸುದ್ದಿ ಯಾಗಿ ದ್ದಾರೆ.ಹೌದು ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಅರುಣ್ ಲಾಲ್ 66ನೇ ವಯಸ್ಸಿನಲ್ಲಿ ತನಗಿಂತ 28 ವರ್ಷ ಚಿಕ್ಕವಳಾಗಿರುವ ಶಿಕ್ಷಕಿ ಬುಲ್ ಬುಲ್ ಸಹಾಳನ್ನು 2ನೇ ಮದುವೆಗೆ ಆಗುವ ಮೂಲಕ ಸುದ್ದಿಯಲ್ಲಿದ್ದಾರೆ.ಬುಲ್ ಬುಲ್ ಸಹಾ 38 ವರ್ಷದವಳಾಗಿದ್ದು ಇವರೊಂದಿಗೆ ಮಾಜಿ ಕ್ರಿಕೆಟಿಗ ಅರುಣ್ ಲಾಲ್ ಮೇ 2ರಂದು ಸಪ್ತಪದಿ ತುಳಿದಿದ್ದಾರೆ.

ಇಬ್ಬರ ವಯಸ್ಸಿನಲ್ಲೂ 28 ವರ್ಷಗಳ ವ್ಯತ್ಯಾಸವಿದ್ದು ಈ ಜೋಡಿಯ ವಿವಾಹದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ.
ಸೋಮವಾರ ಕೋಲ್ಕತ್ತಾದಲ್ಲಿ ಬುಲ್ ಬುಲ್ ಶಾ ಅವರನ್ನು ಅರುಣ್ ಲಾಲ್ ಕೈಹಿಡಿದಿದ್ದುಬಳಿಕ ನವದಂಪತಿ ಕೇಕ್ ಕಟ್ ಮಾಡಿದ್ದಾರೆ.ಇತ್ತ ಬುಲ್ ಬುಲ್ ಅವರು ಕೈಗೆ ಮೆಹಂದಿ ಹಾಕಿ ಫೋಟೋ ತೆಗೆಸಿಕೊಂಡಿದ್ದಾರೆ.ಇದೀಗ ಈ ಎರಡು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.ಅಲ್ಲದೆ ಕುಟುಂಬದವರಿಗೆ ಹಾಗೂ ಗೆಳೆಯರಿಗೆ ನವದಂಪತಿ ಸಾಮಾಜಿಕ ಮಾಧ್ಯಮ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.


66 ವರ್ಷದ ಅರುಣ್ ಲಾಲ್ ಪ್ರಸ್ತುತ ಪಶ್ಚಿಮ ಬಂಗಾಳದ ಮುಖ್ಯ ಕೋಚ್ ಆಗಿದ್ದಾರೆ.ಲಾಲ್ ಮತ್ತು ಸಹಾ ಬಹುಕಾ ಲದಿಂದ ಸಂಬಂಧ ಹೊಂದಿದ್ದರು.ಲಾಲ್ ಅವರ ಮೊದಲ ಪತ್ನಿ ರೀನಾ ಅವರಿಂದ ಒಪ್ಪಿಗೆ ಪಡೆದ ನಂತರವೇ ಅವರು ಈ 2ನೇ ಮದುವೆ ಮಾಡಿಕೊಂಡಿದ್ದಾರೆ.ಈಗಾಗಲೇ ಅವರು ತಮ್ಮ ಮೊದಲ ಪತ್ನಿಯೊಂದಿಗೆ ವಿಚ್ಛೇದನ ಪಡೆದಿದ್ದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಮೊದಲ ಪತ್ನಿಯೊಂದಿಗೆ ಸದ್ಯಕ್ಕೆ ಅರುಣ್ ಲಾಲ್ ವಾಸಿಸುತ್ತಿದ್ದಾರೆ.ಲಾಲ್ ಅವರ ಮದುವೆಯ ಆಮಂತ್ರಣ ಪತ್ರಿಕೆಯ ಚಿತ್ರ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾ ಣದಲ್ಲಿ ಹರಿದಾಡುವ ಮೂಲಕ ಭಾರೀ ಸುದ್ದಿಯಾಗಿತ್ತು.
ಅರುಣ್ ಲಾಲ್ ಉತ್ತರ ಪ್ರದೇಶದ ಮೊರಾದಾಬಾದ್ನೆಲ್ಲಿ 1955ರಲ್ಲಿ ಜನಿಸಿದರು.ಅರುಣ್ ಲಾಲ್ ಕೂಡ ಕೆಲವು ದಿನಗಳ ಕಾಲ ಕಾಮೆಂಟರಿ ಮಾಡಿದ್ದರು.



ಆದರೆ 2016ರಲ್ಲಿ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆ ಯಾಯಿತು.ನಂತರ ಅವರು ಕಾಮೆಂಟರಿ ನಿಲ್ಲಿಸಿದರು.
ಅರುಣ್ ಲಾಲ್ ಅವರು 1982 ಮತ್ತು 89ರ ನಡುವೆ ಭಾರತಕ್ಕಾಗಿ ಒಟ್ಟು 16 ಟೆಸ್ಟ್ ಮತ್ತು 13 ಏಕದಿನ ಪಂದ್ಯ ಗಳನ್ನು ಆಡಿದ್ದಾರೆ.ಈ ಸಮಯದಲ್ಲಿ ಅವರು ಟೆಸ್ಟ್‌ನಲ್ಲಿ 729 ಮತ್ತು ಏಕದಿನ ಪಂದ್ಯಗಳಲ್ಲಿ 122 ರನ್ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ ಅವರ ಬ್ಯಾಟ್‌ನಿಂದ 6 ಅರ್ಧಶತಕಗಳು ಮತ್ತು ಏಕದಿನದಲ್ಲಿ 1 ಅರ್ಧಶತಕ ಸಿಡಿದಿವೆ.