ಧಾರವಾಡ –
ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಾದ್ಯಕ್ಷರನ್ನಾಗಿ ಹಾಸನದ ಎಂ ವಿ ಕುಸುಮ ಅವರನ್ನು ಈ ಕ್ಷಣದಿಂದ ಆಯ್ಕೆ ಮಾಡಲಾಯಿ ತು.ಹಾಸನ ಜಿಲ್ಲೆಯ ಅರಸಿಕರೆ ತಾಲೂಕಿನ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕಿ ಎಂ ವಿ ಕುಸುಮ ಅವರು ಆರಂಭದಿಂದಲೂ ಸಂಸ್ಥಾಪಕ ಉಪಾದ್ಯಕ್ಷರಾಗಿ ಮೂರು ವರ್ಷಗಳಿಂದ ಹಳ್ಳಿಗಾಡಿನ ಶಿಕ್ಷಕರ ಪರವಾಗಿ ಅದರಲ್ಲೂ ವಿಶೇಷವಾಗಿ ಮಹಿಳಾ ಶಿಕ್ಷಕಿಯರ ಪರವಾಗಿ ಪ್ರತಿವರ್ಷ ಎಲೆಮರೆಯ ಕಾಯಿಯಂತಿರುವ ಶಿಕ್ಷಕಿಯರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಇವರು ವರ್ಷಗಳಿಂದ ಹಾಸನ ಜಿಲ್ಲೆಯಲ್ಲಿ ಸಾಕಷ್ಟು ಸಾಕ್ಷರತೆ,ಸಾಮಾಜಿಕ ಪಿಡುಗುಗಳ ವಿರುದ್ಧ ಜನಜಾಗೃತಿ ಮೂಡಿಸುತ್ತಿದ್ದಾರೆ.
ವೈಜ್ಞಾನಿಕ ಕಾರ್ಯಕ್ರಮಗಳುಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಅತ್ಯಂತ ಹೆಚ್ಚು ಹೆಚ್ಚು ತಮ್ಮ ಬಿಡುವಿನ ವೇಳೆಯಲ್ಲಿ ಕಾರ್ಯಕ್ರಮಗಳನ್ನು ಇವರು ಸಂಘಟನೆ ಮಾಡಿರುತ್ತಾರೆ ಗ್ರಾಮೀಣ ಶಿಕ್ಷಕರಿಗೆ ಶಾಲೆಗಳಿಗೆ ಹೋಗಲು ಬಸ್ಸಿನ ಸಮಸ್ಯೆ ಇದ್ದಾಗ ಆ ಒಂದು ಸನ್ನಿವೇಶದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸಂಪರ್ಕಿಸಿ ಸಾರಿಗೆ ವ್ಯವಸ್ಥೆ ಮಾಡಿಸುವುದು,ಯಾವುದೇ ರೀತಿಯಲ್ಲಿ ಗ್ರಾಮೀಣ ಶಿಕ್ಷಕರಿಗೆ ಅನ್ಯಾಯವಾದಾಗ ಮುಂದೆ ನಿಂತು ಕೆಲಸ ಮಾಡಿದ್ದಾರೆ
ಜೊತೆಗೆ ಗ್ರಾಮದ ಶಿಕ್ಷಕರ ಸಂಘದಿಂದ ಆಯೋಜಿಸಿದ ಎಲ್ಲಾ ಕಾರ್ಯಕ್ರಮಗಳಿಗೆ ತನನಧನದ ಸಹಾಯವನ್ನು ಇವರು ಮಾಡಿದ್ದಾರೆ ಗ್ರಾಮೀಣ ಶಿಕ್ಷಕರ ಸಂಘಕ್ಕೆ ಹೆಚ್ಚು ಹೆಚ್ಚು ಆಜೀವ ಸದಸ್ಯತ್ವವನ್ನು ಇವರು ಮಾಡಿರುತ್ತಾರೆ, ಇವರ ಜನಪರ, ಹಾಗೂ ಶೈಕ್ಷಣಿಕ ಕಳಕಳಿ ಮತ್ತು ಗ್ರಾಮೀಣ ಶಿಕ್ಷಕರ ಸಂಘಟನೆಯ ಏಳಿಗೆಗಾಗಿ ಮಾಡಿದ ಕಾರ್ಯವನ್ನು ಗಮನಿಸಿದ ರಾಜ್ಯಾದ್ಯಕ್ಷರಾದ ಅಶೋಕ ಸಜ್ಜನ ಇವರು ಇವರನ್ನು ರಾಜ್ಯ ಘಟಕಕ್ಕೆ ರಾಜ್ಯ ಪ್ರಮುಖ ರಾದ ಎಲ್ ಐ ಲಕ್ಕಮ್ಮನವರ,ಶಿಸ್ತು ಸಮಿತಿಯ ಅದ್ಯಕ್ಷ ರಾದ ಎಂ ಐ ಮುನವಳ್ಳಿ ಶ್ರೀಧರ ಗಣಾಚಾರಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ರಾಜ್ಯ ಕೋಶಾದ್ಯಕ್ಷ ಬಿ ವಿ ಅಂಗಡಿ, ಹನುಮಂತಪ್ಪ ಮೇಟಿ,ಜಿ ಟಿ ಲಕ್ಷ್ಮೀದೇವಮ್ಮ,ಎಂ ವಿ ಕುಸುಮ ಶರಣಬಸವಬನ್ನಿಗೋಳ ರೇವಣ್ಣ ಎಸ್, ಕೆ ನಾಗರಾಜ,ರವಿ ಬಂಗೇನವರ,ಮಾಗೇರಿ ಶ್ರೀನಿವಾಸ,ಮಲ್ಲಿಕಾರ್ಜುನಯ್ಯ ಎಂ ಆರ್,ಮಂಜುಳ ಜೆ ಟಿ, ಸಿದ್ದಣ್ಣ ಉಕ್ಕಲಿ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಎಸ್ ಡಿ ದೊಡಮನಿ,ರುದ್ರೇಶ ಕುರ್ಲಿ,ಕಲ್ಪನ ಚಂದ ನಕರ ಶಿವಲೀಲಾ ಪೂಜಾರ, ಸೇರಿದಂತೆ ಪ್ರಮುಖ ರಾಜ್ಯ ನಾಯಕರು ಅವರಿಗೆ ಶುಭಹಾರೈಸಿದರು.