ಬೆಳಗಾವಿ –
ಉತ್ತರ ಕರ್ನಾಟಕದತ್ತ ಅಸಾವುದ್ದಿನ ಓವೈಸಿ ಕಣ್ಣು ಇಟ್ಟಿದ್ದಾರೆ. ಈ ಒಂದು ಭಾಗದಲ್ಲಿ ಎಐಎಂಐಎ ಪಕ್ಷವನ್ನು ಸಂಘಟನೆ ಮಾಡಲು ಅಖಾಡಕ್ಕಿಗಿಳಿದ್ದಾರೆ ಓವೈಸಿ.

ಹೌದು ಓವೈಸಿ ಎಐಎಂಐಎಂ ಪಕ್ಷದ ಸ್ಥಾಪಕ ಮುಂಬರುವ ಮಹಾನಗರ ಪಾಲಿಕೆ ಮೇಲೆ ಓವೈಸಿ ಚಿತ್ತವನ್ನಿಟ್ಟುಕೊಂಡು ಸಂಘಟನೆ ಮಾಡುತ್ತಿದ್ದಾರೆ. ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಐಎಂಐಎಂ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಸಲು ಸಿದ್ಧತೆ ಆರಂಭಿಸಿದ್ದಾರೆ.ಬೆಳಗಾವಿ, ವಿಜಯಪುರ, ಹುಬ್ಬಳ್ಳಿ ಧಾರವಾಡ, ಬಳ್ಳಾರಿ, ಕಲಬುರ್ಗಿ ಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಎಲ್ಲಾ ಪಕ್ಷದ ಮುಖಂಡರು, ಸಮುದಾಯದ ಮುಖಂಡರನ್ನು ಎಐಎಂಐಎಂ ಪಕ್ಷಕ್ಕೆ ಸೇರಲು ಆಮಂತ್ರಣವನ್ನು ನೀಡಿದ್ದಾರೆ.

ಎಐಎಂಐಎಂ ಮುಖಂಡ ಲತೀಫ್ ಖಾನ್ ಪಠಾಣ. ಈ ಕುರಿತಂತೆ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇವರ ನೇತೃತ್ವದಲ್ಲಿ ಉತ್ತರ ಕರ್ನಾಟಕದಲ್ಲಿ ಸಂಚಾರವನ್ನು ಮಾಡಲಾಗುತ್ತಿದೆ. ಉತ್ತರ ಕರ್ನಾಟಕದ ಮೂಲಕ ಕರ್ನಾಟಕ ರಾಜಕಾರಣಕ್ಕೆ ಎಐಎಂಐಎಂ ಪಕ್ಷ ಎಂಟ್ರಿ ಕೊಡಲಿದೆ ಎಂದು ಹೇಳಿದರು.
ಸಧ್ಯ ಮುಂಬರುವ ಪಾಲಿಕೆಯ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಈ ಒಂದು ಪ್ಲಾನ್ ಮಾಡಿದ್ದು ಈಗಾಗಲೇ ತೆರೆ ಮೆರೆಯಲ್ಲಿ ಎಲ್ಲಾ ಸಿದ್ದತೆಗಳನ್ನು ಸಂಘಟನೆ ವತಿಯಿಂದ ಮಾಡಲಾಗುತ್ತಿದ್ದು ಆಸಕ್ತ ಎಲ್ಲಾ ಪಕ್ಷಗಳಲ್ಲಿನ ಮುಖಂಡರು ಕಾರ್ಯಕರ್ತರು ಪಕ್ಷಕ್ಕೇ ಬರಬಹುದು ಅವರಿಗೆ ಮುಕ್ತಾ ಆಹ್ವಾನ ಎಂದು ಪಠಾಣ ಹೇಳಿದರು.
ಇದೇ ವೇಳೆ ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಪಕ್ಷವನ್ನು ತಳ ಮಟ್ಟದಿಂದ ಸಂಘಟನೆ ಮಾಡುತ್ತಿದೆ ಎಂದು ಹೇಳಿದರು.