ಹುಬ್ಬಳ್ಳಿ –
ರಸ್ತೆಯಲ್ಲಿ ಬಿದ್ದಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್ ನ್ನು ಆಟೋ ಚಾಲನೋರ್ವ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ. ಹೌದು
ಹುಬ್ಬಳ್ಳಿ ಸಿಬಿಟಿಯಿಂದ ಗಾಮನಗಟ್ಟಿಗೆ ತೆರಳು ತ್ತಿದ್ದ ಸಂದರ್ಭದಲ್ಲಿ ಬ್ಯಾಗ್ ಕೆಳಗಡೆ ಬಿದ್ದಿತ್ತು. ಪೂಜಾ ಪತ್ತಾರ ಎಂಬುವರಿಗೆ ಸೇರಿದ ಬ್ಯಾಗ್ ನಲ್ಲಿ 2 ಲಕ್ಷ ರೂ. ಮೌಲ್ಯದ 40 ಗ್ರಾಂ ಬಂಗಾರದ ಚೈನ್ ಹಾಗೂ ಇನ್ನಿತರ ವಸ್ತುಗಳು ಇದ್ದವು ಈ ಒಂದು ಬ್ಯಾಗ್ ಆಟೋ ಚಾಲಕ ಹನಮಂತ ಪಾಟೀಲ್ ಗೆ ಸಿಕ್ಕಿದೆ ಕೂಡಲೇ ಇವನು ಹಳೆ ಹುಬ್ಬಳ್ಳಿಯ ಪೊಲೀಸರಿಗೆ ಮಾಹಿತಿ ನೀಡಿ ಮರಳಿ ವಾರಸುದಾರ ರಿಗೆ ಈ ಒಂದು ವ್ಯಾನಿಟಿ ಬ್ಯಾಗ್ ನೀಡುವುದರ ಮುಖಾಂತರ ಪ್ರಮಾಣಿ ಕತೆ ಮೆರೆದಿದ್ದಾರೆ.
ಸದ್ಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ವ್ಯಾನಿಟಿ ಬ್ಯಾಗ್ ಒಪ್ಪಿಸಿ ಪೂಜಾ ಪತ್ತಾರ್ ಎಂಬುವವರಿಗೆ ಚಿನ್ನಾಭರಣವಿರುವ ಬ್ಯಾಗ್ ನ್ನು ಹನುಮಂತಪ್ಪ ಪಾಟೀಲ್ ಅವರು ಪ್ರಾಮಾಣಿಕತೆಯಿಂದ ನೀಡಿದ್ದು ಪೊಲೀಸರು ಹಾಗೂ ಸಾರ್ವಜನಿಕರು ಪ್ರಮಾಣಿಕ ಆಟೋ ಚಾಲಕನ ಕಾರ್ಯವೈಖರಿ ಯನ್ನು ಮೆಚ್ಚಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..