ಕಲಘಟಗಿ –
ಟ್ಯಾಕ್ಟರ್ ಮತ್ತು ಆಟೋ ಡಿಕ್ಕಿಯಾಗಿ ಇಬ್ಬರು ಸಾವಿಗೀಡಾರುವ ಘಟನೆ ಧಾರವಾಡದ ಕಲಘಟಗಿಯಲ್ಲಿ ನಡೆದಿದೆ.
ಕಲಘಟಗಿ ತಾಲ್ಲೂಕಿನ ತಡಸ ಕ್ರಾಸ್ ಬಳಿ ಈ ಒಂದು ಘಟನೆ ನಡೆದಿದೆ. ಹುಬ್ಬಳ್ಳಿಯಿಂದ ಕೂಲಿ ಮಾಡಲು ಆಟೋದಲ್ಲಿ ಗುಡ್ಡ ಹೂಲಿಕಟ್ಟಿ ಗೆ ಕಾರ್ಮಿಕರು ತೆರಳುತ್ತಿದ್ದರು. ಆಟೋಗೆ ಟ್ಯಾಕ್ಟ್ ರ್ ಡಿಕ್ಕಿಯಾಗಿದ್ದು ಸ್ಥಳದಲ್ಲಿಯೇ ಇಬ್ಬರು ಸಾವಿಗೀಡಾಗಿದ್ದಾರೆ .
ಇನ್ನೂ ಐವರು ತೀವ್ರವಾಗಿ ಗಾಯಗೊಂಡಿದ್ದು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಇನ್ನೂ ಅಪಘಾತದ ಮಾಹಿತಿ ತಿಳಿದ ಕಲಘಟಗಿ ಪೊಲೀಸರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿದರು.
ಸಾವಿಗೀಡಾದವರ ಮತ್ತು ಗಾಯಗೊಂಡಿರುವವ ಮಾಹಿತಿಯನ್ನು ಕಲಘಟಗಿ ಇನಸ್ಪೇಕ್ಟರ್ ವಿಜಯ ಬಿರಾದಾರ್ ಮತ್ತು ಸಿಬ್ದಂದಿಗಳು ಕಲೆ ಹಾಕುತ್ತಿದ್ದಾರೆ.
ಅಲ್ಲದೇ ಅಪಘಾತಕ್ಕೇ ಕಾರಣ ಏನು ಹೀಗೆ ಎಲ್ಲವನ್ನೂ ಕಲಘಟಗಿ ಪೊಲೀಸರು ಪಡೆದುಕೊಳ್ಳುತ್ತಿದ್ದು ಪ್ರಕರಣವನ್ನು ದಾಖಲು ಮಾಡಿಕೊಂಡಿರುವ ಕಲಘಟಗಿ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.